ರವಿವಾರ ಗೃಹ ಲಕ್ಷ್ಮಿ ಸರ್ವರ್ ಬಂದ್!ಬಡದಾಡಿಕೊಂಡ ಬೆಳಗಾವಿ ಜನತೆ

Share the Post Now

ಬೆಳಗಾವಿ

ಬೆಳಗಾವಿ :ಗೃಹ ಲಕ್ಷ್ಮಿ ಸರ್ವರ್ ಬಂದ್ ಆರೋಪ : ಮಹಿಳಾ ಸಿಬ್ಬಂದಿ ಹಾಗೂ ಸೆಕ್ಯುರಿಟಿ ಗಾರ್ಡ್ ಮೇಲೆ ಸಾರ್ವಜನಿಕರಿಂದ ಹಲ್ಲೆ…ರಾಜ್ಯಾದ್ಯಂತ ಗೃಹಲಕ್ಷ್ಮೀ ನೋಂದಣಿಗಾಗಿ‌‌ ಸರ್ವರ್ ಬಂದ್ ಹಿನ್ನೆಲೆಯಲ್ಲಿ ಸಾರ್ವಜನಿಕರು ಗೃಹ ಲಕ್ಷ್ಮೀ ಅರ್ಜಿ ಆಪರೇಟರ್ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ನಗರದ ವೀರಾಪೂರ ಓಣಿಯಲ್ಲಿನ ಕರ್ನಾಟಕ ಒನ್ ಕೇಂದ್ರದಲ್ಲಿ ನಡೆದಿದೆ.

ಇಂದು ಭಾನುವಾರ ಗೃಹಲಕ್ಷ್ಮೀ ಸರ್ವರ ಬಂದ್ ಇರುವುದಾಗಿ ಸರ್ಕಾರ ನಿನ್ನೆ ರಾತ್ರಿ ಆದೇಶ ಹೊರಡಿಸಿತ್ತು. ಆದರೆ ಬೆಳಗಿನ ಜಾವ 4 ಗಂಟೆಯಿಂದಲ್ಲೇ ಸರತಿ ಸಾಲಿನಲ್ಲಿ ನಿಂತಿದ್ದ ಸಾರ್ವಜನಿಕರು‌ ಕೇಂದ್ರದ ಹೊರಗೆ ನೋಟಿಸ್ ಹಚ್ಚಿದರೂ ಕೂಡ ಗಮನಿಸಿರಲಿಲ್ಲ.

ಬೇಕಂತಲ್ಲೇ ನೀವು ಕೇಂದ್ರವನ್ನು ಬಂದ್ ಮಾಡಿದ್ದೀರಿ ಎಂದು ಆರೋಪಿಸಿ ಮಾತಿಗೆ ಮಾತು ಬೆಳೆದು ಕರ್ನಾಟಕ ಒನ್ ಮಹಿಳಾ ಸಿಬ್ಬಂದಿ ಹಾಗೂ ಸೆಕ್ಯೂರಿಟಿ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಆಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಬೆಂಡಿಗೇರಿ ಠಾಣೆಯ ಪೊಲೀಸರು ಕರ್ನಾಟಕ ಒನ್ ಸೇವಾ ಕೇಂದ್ರಕ್ಕೆ ಬೀಗ ಹಾಕಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಕರ್ನಾಟಕ ಒನ್ ಎದುರು ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಬೆಂಡಿಗೇರಿ ಠಾಣೆಯ ಪೊಲೀಸರು ನಿಯೋಜನೆಗೊಂಡಿದ್ದಾ

Leave a Comment

Your email address will not be published. Required fields are marked *

error: Content is protected !!