ಗೃಹ ಲಕ್ಷ್ಮೀ ಯೋಜನೆ ಮಹಿಳೆಯರು ಸದುಪಯೋಗಪಡೆದುಕೊಳ್ಳಿ :ಸುರೇಶ ಮಗದುಮ

Share the Post Now

ಬೆಳಗಾವಿ

ಹಳ್ಳೂರ . ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಗೃಹ ಲಕ್ಷ್ಮೀ ಯೋಜನೆಯಿಂದ ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸರಕಾರವು ಈ ಯೋಜನೆ ಜಾರಿಗೆ ಮಾಡಿದೆ ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅರಬಾಂವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಮಗದುಮ ಹೇಳಿದರು.                    ಗ್ರಾಮ ಪಂಚಾಯತಿ ಕಚೇರಿಯಲ್ಲಿ ಗೃಹ ಲಕ್ಷ್ಮೀ ಯೋಜನೆ ಮಂಜೂರಾತಿ ಆದೇಶ ಪತ್ರವನ್ನು ವಿತರಿಸಿ ಮಾತನಾಡಿ ರಾಜ್ಯ ಸರಕಾರದ ಕಾಂಗ್ರೇಸ್ ಸರ್ಕಾರ ಚುನಾವಣೆಗೂ ಮುನ್ನವೇ ಭರವಸೆ ನೀಡಿದಂತೆ ಅಧಿಕಾರಕ್ಕೆ ಬಂದ ಬಳಿಕ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿದೆ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮೀ ಯೋಜನೆಯೂ ಮಹತ್ವದ್ದಾಗಿದೆ. ಪ್ರತಿ ತಿಂಗಳು ಮನೆಯ ಒಡತಿಗೆ ಎರಡು ಸಾವಿರ ರೂಪಾಯಿ ಆರ್ಥಿಕ ಸಹಾಯವನ್ನು ನೀಡಲಾಗುತ್ತಿದೆ ಪಲಾನುಭವಿಗಳು  ಸರಕಾರಿ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಿ ಯಾರಿಗೂ ಹಣ ಕೊಡಬೇಡಿರೆಂದು  ಹೇಳಿದರು.                                   ಈ ಸಮಯದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಂಗಪ್ಪ ಗುಜನಟ್ಟಿ. ಕಾರ್ಯದರ್ಶಿ ಪ್ರಶಾಂತ ಕರಿಗಾರ. ಸಮಾಜ ಸೇವಕ ಮುರಿಗೆಪ್ಪ ಮಾಲಗಾರ. ಮಹಾಂತೇಶ ಸಂತಿ. ಮಹಾಂತೇಶ ಕುಂದರಗಿ.  ಈಶ್ವರ ವೆಂಕಟಾಪುರ. ದುಂಡಪ್ಪ ಕೌಜಲಗಿ.ರಮೇಶ ದುರದುಂಡಿ. ಲಕ್ಷ್ಮಣ ಕೌಜಲಗಿ. ಸುಮಿತ್ರಾ ಹಿರೇಮಠ. ಮಹಾದೇವಿ ಗೋಲಬಾಂವಿ. ಯಲ್ಲವ್ವ ಬಾಗಿ. ಪಾರವ್ವ ಕೂಲಿಗೊಡ. ರಾಜಶ್ರೀ ಮಾಲಗಾರ. ಮಲ್ಲವ್ವ ಲೋಕಣ್ಣವರ. ಸೇರಿದಂತೆ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಸಾರ್ವನಿಕರಿದ್ದರು. 

Leave a Comment

Your email address will not be published. Required fields are marked *

error: Content is protected !!