ಬೆಳಗಾವಿ. ರಾಯಬಾಗ
ಕುಡಚಿ ಮತಕ್ಷೇತ್ರದ ಕಾಂಗ್ರೆಸ ಪಕ್ಷದ ಟಿಕೆಟ್ ಆಕಾಂಕ್ಷಿಯಾದ ಎನ್ ಪ್ರಶಾಂತರಾವ ಐಹೊಳೆ ಅವರಿಂದ ಕ್ಷೇತ್ರದಲ್ಲಿ ಗ್ಯಾರಂಟಿ ಕಾರ್ಡ್ ವಿತರಣೆ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಅಳಗವಾಡಿ, ನಿಡಗುಂದಿ, ಮೊರಬ ಗ್ರಾಮ ಸೇರಿದಂತೆ ಕ್ಷೇತ್ರದ ವಿವಿಧ ಗ್ರಾಮದ ಮನೆಗಳಿಗೆ ಕುಡಚಿ ಮತಕ್ಷೇತ್ರದ ಕಾಂಗ್ರೆಸ ಪಕ್ಷದ ಪ್ರಭಲ ಟಿಕೆಟ್ ಆಕಾಂಕ್ಷಿ ಯಾಗಿರುವ ಡಾ.ಎನ್ ಪ್ರಶಾಂತರಾವ್ ಐಹೊಳೆ ಅವರು ಕಾಂಗ್ರೆಸ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಿಸಿದರು.
ಕಾಂಗ್ರೆಸ್ಸನ ಮೊದಲ ಗ್ಯಾರಂಟಿ ಕಾರ್ಡ್ ಗೃಹ ಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯುನಿಟ ವಿದ್ಯುತ ಉಚಿತ ಪೂರೈಕೆ,
ಹಾಗೂ ಪ್ರತಿ ಮನೆ ಯಜಮಾನಿಗೆ ಎರಡು ಸಾವಿರು ರೂ ಪ್ರೋತ್ಸಾಹ ಧನ ನೀಡಲು ಗೃಹಲಕ್ಷ್ಮಿ ಯೋಜನೆ ಜಾರಿ,
ಮೂರನೇ ಗ್ಯಾರಂಟಿಯಾಗಿ ಅನ್ನ ಭಾಗ್ಯ ಯೋಜನೆಯ ಮೂಲಕ ಬಿಪಿಎಲ್ ಕಾರ್ಡದಾರಿಗೆ ಹತ್ತು ಕೆ.ಜಿ ಅಕ್ಕಿ ಉಚಿತವಾಗಿ ನೀಡುವ ಭರವಸೆಯ ಕಾರ್ಡುಗಳನ್ನು ಮನೆಗಳಿಗೆ ವಿತರಿಸಿದರು.
ಚಿಂಚಲಿಯ ಆದಿಶಕ್ತಿ ಶ್ರೀ ಮಯಕ್ಕಾ ದೇವಿ ಉಡಿ ತುಂಬಿ, ಆಶೀರ್ವಾದ ಪಡೆದ ನಂತರ ಕುಡಚಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಲವು ವರ್ಷಗಳಿಂದ ಕುಡಚಿ ಮತಕ್ಷೇತ್ರದ ಜನತೆಯ ಜೋತೆಗೆ ಒಳ್ಳೆಯ ಒಡನಾಟವನ್ನು ಹೊಂದಿದ್ದೆನೆ. ಬೆಳಗಾವಿ ಜಿಲ್ಲಾ ಪಂಚಾಯತ ಅಧ್ಯಕ್ಷರ ಕೂಡ ಈ ಭಾಗದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತ, ಕಾಂಗ್ರೆಸ ಪಕ್ಷವನ್ನು ಬಲಪಡಿಸುತ್ತಾ ಬಂದಿರುತ್ತೆನೆ. ಈಗಾಗಲೇ ನಮ್ಮ ಭಾರತ ವೈಭವ ಮಾಧ್ಯಮ ಸಂಸ್ಥೆಯಿಂದ ಸಾವಿರಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ಕೊಡಿಸಿರುತ್ತೇನೆ.
ಅಲ್ಲದೆ ನನ್ನ ಪತ್ನಿ ಆಶಾ ಪ್ರಶಾಂತರಾವ್ ಐಹೊಳೆ ಅವರು ಕಾಂಗ್ರೆಸ್ ಪಕ್ಷದಿಂದ ಬೆಳಗಾವಿ ಜಿಲ್ಲಾ ಪಂಚಾಯತ ಅಧ್ಯಕ್ಷರಾಗಿ ಐದು ವರ್ಷಗಳ ಕಾಲ ಆಡಳಿತ ನಡೆಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ ಪಕ್ಷವನ್ನು ಸಂಘಟಿಸುತ್ತಾ ಬಂದಿರುತ್ತಾರೆ.ತಮ್ಮನಾದ ರಾವಸಾಹೇಬ ಐಹೊಳೆ ಅವರು ಅಥಣಿ ಪುರಸಭೆ ಅಧ್ಯಕ್ಷರಾಗಿ, ಸದಸ್ಯರಾಗಿ, ತಮ್ಮನ ಪತ್ನಿ ವಿದ್ಯಾ ರಾವಸಾಬ ಐಹೊಳೆ ಪುರಸಭೆ ಸದಸ್ಯೆಯಾಗಿ, ತಾಯಿ ಬಂಗಾರೆವ್ವ ನಿವೃತ್ತಿ ಐಹೊಳೆ ಸಂಬರಗಿ ಗ್ರಾಮ ಪಂಚಾಯತಿಯ ಅಧ್ಯಕ್ಷೆಯಾಗಿ ಸದ್ಯ ಗ್ರಾಮ ಪಂಚಾಯತಿಯ ಸದಸ್ಯೆ ಯಾಗಿ ಕೆಲಸ ಮಾಡುತ್ತಿದ್ದಾರೆ ಈ ರೀತಿಯಾಗಿ ಕುಟುಂಬದಲ್ಲಿ ರಾಜಕೀಯ ಹಿನ್ನೆಲೆಯನ್ನು ಹೊಂದಿದ್ದೆನೆ.
ಕುಡಚಿ ಎಸ್ ಸಿ ಮೀಸಲು ಮತಕ್ಷೇತ್ರವಾಗಿರುತ್ತದೆ ಈ ಕುಡಚಿ ಮತಕ್ಷೆತ್ರದಲ್ಲಿ ಒಟ್ಟು 31ಗ್ರಾಮಗಳು, 1ಲಕ್ಷ 85ಸಾವಿರ ಮತದಾರರಿದ್ದು, 217 ಮತಗಟ್ಟೆಗಳಿವೆ.ಇಲ್ಲಿ ಎಸ ಸಿ ಯಲ್ಲಿ ಮಾದಿಗ ಸಮುದಾಯ ದೊಡ್ಡ ಸಂಖ್ಯೆಯಲ್ಲಿದೆ . ಸುಮಾರು 31ಸಾವಿರ ಮಾದಿಗ ಮತದಾರರಿದ್ದಾರೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಾದಿಗ ಮತದಾರರಿದ್ದು ಎಲ್ಲರೂ ಇಲ್ಲಿಯ ವರೆಗೆ ಕಾಂಗ್ರೆಸ ಪಕ್ಷವನ್ನು ಬೆಂಬಲಿಸುತ್ತ ಬಂದಿರುತ್ತಾರೆ ಆದರೆ ಇಲ್ಲಿಯ ವರೆಗೆ ಕಾಂಗ್ರೆಸ ಪಕ್ಷ ಮಾದಿಗ ಸಮುದಾಯಕ್ಕೆ ಟಿಕೇಟ್ ಕೊಟ್ಟಿರುವುದಿಲ್ಲ ಆದ್ದರಿಂದ ಬರುವ ವಿಧಾನಸಭಾ ಚುನಾವಣೆಯಲ್ಲಿ ಮಾದಿಗ ಸಮಾಜ ಸೇರಿದಂತೆ ಕ್ಷೇತ್ರದ ಎಲ್ಲ ಸಮುದಾಯಗಳ ಜೋತೆ ಉತ್ತಮ ಬಾಂಧವ್ಯ ವಿರುವ ನನಗೆ ಈ ಬಾರಿ ಕಾಂಗ್ರೆಸ ಪಕ್ಷ ಟಿಕೆಟ್ ಕೊಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ ಪಕ್ಷ ಜನಪರ ಯೋಜನೆಗಳನ್ನು ಜಾರಿಗೆ ತಂದು ಜನರ ಕಲ್ಯಾಣ ಮಾಡಿತ್ತು ಆದರೆ ಈಗಿನ ಬಿಜೆಪಿ ಸರ್ಕಾರ ಬರಿ ಹಗರಣಗಳನ್ನು ಮಾಡಿತ್ತಿದ್ದೆ ಎಂದು ದೂರಿದರು ಕುಡಚಿ ಮತಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಯುವಕರು ನಿರುದ್ಯೋಗಿಗಳಾಗಿದ್ದಾರೆ ಇಲ್ಲಿಯ ಜನರಿಗೆ ಸರಿಯಾದ ಸರಿಯಾದ ಶಿಕ್ಷಣ ಸಿಗುತ್ತಿಲ್ಲ ಬರುವ ದಿನಗಳಲ್ಲಿ ಕ್ಷೇತ್ರದಲ್ಲಿ ಯುವಕರಿಗೆ ಉದ್ಯೋಗ ಹಾಗೂ ಬಡ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯುವ ವ್ಯವಸ್ಥೆ ಮಾಡಲಾಗುವುದು ಎಂದರು. ಸುದ್ದಿ ಗೋಷ್ಠಿಯಲ್ಲಿ ಕಾಯಕ ಮಠದ ಶ್ರೀ ಮಹಾಂತ ದೇವರು, ರಾಘವೇಂದ್ರ ಪಾಟೀಲ, ಅಮರ್ ಪಾಟೀಲ, ನಾಯಿಕ್, ರಾಹುಲ್ ಖಂಡೆ ಹಾಗೂ ಇನ್ನಿತರು ಉಪಸ್ಥಿತರಿದ್ದರು.