ಗುರು, ತಂದೆ, ತಾಯಿಯರೆ ನಿಜವಾದ ದೇವರುಗಳು*: ಕೆ.ಬಿ.ಸಾಯನ್ನವರ ಅಭಿಮತ

Share the Post Now

ಬೆಳಗಾವಿ.ರಾಯಬಾಗ ವಿದ್ಯೆ ಕರುಣಿಸುವ ಗುರು,ಜನ್ಮನೀಡಿದ ತಂದೆ ತಾಯಿಯರೇ ನಮ್ಮ ಕಣ್ಮುಂದೆ ಇರುವ ನಿಜವಾದ ದೇವರುಗಳು ಎಂದು ಕಿತ್ತೂರು ರಾಣಿ ಚೆನ್ನಮ್ಮ ಕನ್ಯಾ ವಸತಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಕೆ.ಬಿ. ಸಾಯಣ್ಣವರ ಅಭಿಮತ ವ್ಯಕ್ತಪಡಿಸಿದರು.


ಅವರು ಶುಕ್ರವಾರ ದಿನಾಂಕ 16 ರಂದು ತಾಲ್ಲೂಕಿನ ಕಪ್ಪಲಗುದ್ದಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ 6 ನೇ ತರಗತಿಯ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಘನ ಅಧ್ಯಕ್ಷತೆ ವಹಿಸಿ ಆಶಯ ನುಡಿ ಹಂಚಿಕೊಂಡರು.ಗ್ರಾಮೀಣ ಭಾಗದ ಹಿಂದುಳಿದ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರ ಉಜ್ವಲ ಭವಿಷ್ಯವನ್ನು ರೂಪಿಸುವುದೇ ವಸತಿ ಶಾಲೆಗಳ ಮಹೋನ್ನತ ಉದ್ದೇಶವಾಗಿದೆ ಎಂದು ನುಡಿದರು. ಇದಕ್ಕೂ ಮೊದಲು ಕಲಾಸ್ಫೂರ್ತಿ ವೇದಿಕೆಯ ಮೇಲೆ ಆಗಮಿಸಿದ್ದ ಶಾಲೆಯ ಸಕಲ ಗುರು ಬಳಗ ಹಾಗೂ ಇಬ್ಬರು ಪಾಲಕ ಪ್ರತಿನಿಧಿಗಳು ಶಾರದಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಿಕ್ಷಕರಾದ ಶ್ರೀ ಎಂ.ಎನ್. ಹಲಕಿ,ಹಾಗೂ ಶ್ರೀಮತಿ ಜೆ.ಎ.ಮೇಕನಮರಡಿ ಶಿಕ್ಷಣದ ಮಹತ್ವದ ಬಗ್ಗೆ ಮನೋಜ್ಞವಾಗಿ ವಿಶ್ಲೇಷಿಸಿದರು.ಪಾಲಕರ ಪರವಾಗಿ ಖೇಮಲಾಪುರದ ಕನ್ನಡ ಪ್ರಾಧ್ಯಾಪಕರಾದ ಡಾ.ಜಯವೀರ ಎ.ಕೆ. ಅಲಖನೂರ ಗ್ರಾಮದ ಮಾಜಿ ಸೈನಿಕರಾದ ಶ್ರೀ ಗೋಪಾಲ ಪೂಜೇರಿ,ಹಾಗೂ ಅರಣ್ಯ ಇಲಾಖೆಯ ಅಧಿಕಾರಿ, ಶ್ರೀ ರಾಜು ಕಾಖಂಡಕಿ ಅವರು ಈ ಜ್ಞಾನ ದೇಗುಲ ಹಾಗೂ ಇಂದಿನ ಶಿಕ್ಷಣ ವ್ಯವಸ್ಥೆಯ ಕುರಿತು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.


ಕಾರ್ಯಕ್ರಮದಲ್ಲಿ 6 ನೇ ವರ್ಗಕ್ಕೆ ನೂತನವಾಗಿ ಪ್ರವೇಶ ಪಡೆದ ವಿದ್ಯಾರ್ಥಿನಿಯರನ್ನು ಶಾಲೆಯ ಶಿಕ್ಷಕರು ಸಾಂಕೇತಿಕವಾಗಿ ಸ್ವಾಮಿ ಪುರುಷೋತ್ತಮಾನಂದರು ವಿರಚಿತ “ವಿದ್ಯಾರ್ಥಿಗಳಿಗಾಗಿ” ಎಂಬ ಪುಟ್ಟ ಕೃತಿ ನೀಡಿ ಸ್ವಾಗತಿಸಿದ್ದು ಗಮನಾರ್ಹ.ಶಿಕ್ಷಕರುಗಳಾದ ಕೆ.ಜಿ.ಪಾಟೀಲ, ಎಂ.ಎನ್. ಹಲಕಿ,ಎಸ್.ಕೆ.ಕಾಂಬಳೆ,ಪಿ.ಎಸ್.ಪಾಟೀಲ ಹಾಗೂ ಎನ್. ಎಸ್.ವಂಜಿರೆ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ದೈಹಿಕ ಶಿಕ್ಷಕ ಶ್ರೀ ಎಸ್.ಎಸ್.ಪಾಟೀಲ ಸ್ವಾಗತಿಸಿದರು. ವೈ. ಎಲ್.ಕುರಿಬಾನಿ ನಿರೂಪಿಸಿದರು. ಪಿ.ಎಸ್.ಪಾಟೀಲ ಶರಣು ಸಮರ್ಪಿಸಿದರು.

ವರದಿ:ಡಾ.ಜಯವೀರ ಎ.ಕೆ*
*ಖೇಮಲಾಪುರ*.

Leave a Comment

Your email address will not be published. Required fields are marked *

error: Content is protected !!