ವರದಿ: ಪ್ರಕಾಶ ಚ ಕಂಬಾರ
ಬೆಳಗಾವಿ, ಸಂದೇಶ
ಮುಗಳಖೋಡ: ಪಟ್ಟಣದ ಶ್ರೀ ಚ ವಿ ವ ಸಂಘದ ಡಾ.ಸಿ ಬಿ ಕುಲಿಗೋಡ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಸನ್ 1999 ರಿಂದ 2002 ರವರೆಗೆ ಬ.ನೀ.ಕುಲಿಗೋಡ ಪ್ರೌಢಶಾಲೆಯಲ್ಲಿ ಅಧ್ಯಯನ ನಡೆಸಿದ ಹಳೆ ವಿದ್ಯಾರ್ಥಿಗಳ ಬಳಗದಿಂದ ರವಿವಾರ ದಿನಾಂಕ 29.01.2023 ರಂದು ಮುಂಜಾನೆ 10.00 ಗಂಟೆಗೆ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರುಗಲಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಡಾ ಸಿ ಬಿ ಕುಲಿಗೋಡ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ವಡೇರಹಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀ ವಿಠ್ಠಲ ಸಿ ಜೋಡಟ್ಟಿ ಆಗಮಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸನ್ 1999 ರಿಂದ 2002 ರ ವಿದ್ಯಾರ್ಥಿಗಳಿಗೆ ಬೋಧನೆ ಗೈದ ಎಲ್ಲ ಗುರುವೃಂದಕ್ಕೆ ಹಾಗೂ ಸಿಬ್ಬಂದಿಯವರಿಗೆ ಸನ್ಮಾನ ಸಮಾರಂಭ ನಡೆಯಲಿದೆ ಹಾಗೂ 1999 ರಿಂದ 2002 ರ ಅವಧಿಯಲ್ಲಿ ಅಧ್ಯಯನ ನಡೆಸಿದ ಎಲ್ಲ ವಿದ್ಯಾರ್ಥಿಗಳು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿದ್ಯಾರ್ಥಿಗಳ ಬಳಗದವರು 28.01.2023 ರಂದು ಮಧ್ಯಾಹ್ನ 03 ಗಂಟೆಗೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.