ಸಂಭ್ರಮದಿಂದ ಜರುಗಿದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ

Share the Post Now

ಬೆಳಗಾವಿ, ಸಂದೇಶ

ವರದಿ: ಶ್ರೀ ಪ್ರಕಾಶ ಚ ಕಂಬಾರ


ಮುಗಳಖೋಡ: ಪಟ್ಟಣದ ಶ್ರೀ ಚ ವಿ ವ ಸಂಘದ ಡಾ.ಸಿ ಬಿ ಕುಲಿಗೋಡ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಸನ್ 1999 ರಿಂದ 2002 ರವರೆಗೆ ಬ.ನೀ.ಕುಲಿಗೋಡ ಪ್ರೌಢಶಾಲೆಯಲ್ಲಿ ಅಧ್ಯಯನ ನಡೆಸಿದ ಹಳೆ ವಿದ್ಯಾರ್ಥಿಗಳ ಬಳಗದಿಂದ ರವಿವಾರ ದಿನಾಂಕ 29.01.2023 ರಂದು ಮಧ್ಯಾಹ್ನ 12.00 ಗಂಟೆಗೆ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಡಾ ಸಿ ಬಿ ಕುಲಿಗೋಡ ಅವರು ಸಸಿಗೆ ನೀರುಣಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಡೇರಹಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀ ವಿಠ್ಠಲ ಸಿ ಜೋಡಟ್ಟಿ ಅವರು ಮಾತನಾಡಿ ಗುರು ಪರಂಪರೆಯ ಮಹತ್ವದ ಬಗ್ಗೆ ತಿಳಿಸಿದರು.
ನಂತರದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಗುರುವೃಂದಕ್ಕೆ ಸನ್ಮಾನ ಸಮಾರಂಭ ನೆರವೇರಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಪ್ರಕಾಶ ಆದಪ್ಪಗೋಳ, ಮಯೂರ ಕುರಾಡೆ, ಎಂ.ಕೆ.ಬೀಳಗಿ, ಎಸ್.ಎಸ್.ಮಧಾಳೆ ಹಾಗೂ 1999 ರಿಂದ 2002 ರ ಅವಧಿಯಲ್ಲಿ ಅಧ್ಯಯನ ನಡೆಸಿದ ಎಲ್ಲ ವಿದ್ಯಾರ್ಥಿಗಳು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ವಿಜಯಪೂರದ ಆಯುಕ್ತರಾದ ವಿಜಯ ಮೆಕ್ಕಳಕಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶಿಕ್ಷಕರಾದ ವಿಜಯ ಕುಲಿಗೋಡ ಹಾಗೂ ಬಸವರಾಜ ಯಡವನ್ನವರ ನಿರೂಪಿಸಿದರು. ಶಿಕ್ಷಕರಾದ ಜಿ.ಎಸ್.ಕಂಬಾರ ವಂದಿಸಿದರು.

Leave a Comment

Your email address will not be published. Required fields are marked *

error: Content is protected !!