ವರದಿ: ರಾಜಶೇಖರ ಶೇಗುಣಸಿ
ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಗೊರವನಹಳ್ಳಿದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ನಿಮಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಆಂಜನೇಯ ಸ್ವಾಮಿ ಮೂರ್ತಿಗೆ ವಿಶೇಷ ರುದ್ರಾಭಿಷೇಕ. ಮುತ್ತೈದೆಯರಿಗೆ ಉಡಿ ತುಂಬ ಕಾರ್ಯಕ್ರಮ ಜರುಗಿತು. ಬಾಲ ಹನುಮನ ಮೂರ್ತಿಯನ್ನು ಮುತ್ತೈದೆಯರು ತೊಟ್ಟಿಲಲ್ಲಿ ಹಾಕಿ ಜೋಗುಳ ಹಾಡಿ ಹೆಸರನ್ನಿಟ್ಟು ಸಂಭ್ರಮಿಸಿದರು.
ಮಕ್ಕಳ ಭಾಗ್ಯಕ್ಕಾಗಿ ಫಲಾಫೇಕ್ಷೆಗಳಾಗಿ ಬಂದಿದ್ದ ಮಹಿಳೆಯರಿಗೆ ಉಡಿ ತುಂಬಿ ಆಶೀರ್ವದಿಸಲಾಯಿತು. ದಾಸೋಹದ ಮಹಾ ಮನೆಯಲ್ಲಿ ಪ್ರಸಾದದ ಸೇವೆ ಅಚ್ಚುಕಟ್ಟಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಕಲ ಸದ್ಭಕ್ತರು ಆಂಜನೇಯ ಸ್ವಾಮಿಯ ದರ್ಶನ ಪಡೆದು ಹರ್ಷ ವ್ಯಕ್ತಪಡಿಸಿದರು.





