ಹಳ್ಳೂರ .
ಪವಮಾನ ಹೋಮ ಹಾಗೂ 5 ದಿನದ ಮಾಲಾದಾರಣೆ ಕಾರ್ಯಕ್ರಮವು ಅತೀ ವಿಜೃಂಭಣೆಯಿಂದ ಸೋಮವಾರದಂದು ನೂರಾರು ಶ್ರೀ ರಾಮನ ಮಾಲಾಧಾರಿಗಳಿಂದ ಜರುಗಿತು. ಬೆಳಿಗ್ಗೆ ಪ್ರಾರಂಭದಲ್ಲಿ ಹಳ್ಳದ ರಂಗನ ದೇವಸ್ಥಾನದಲ್ಲಿ ಪವಮಾನ ಹೋಮ ನಡೆದು ನಂತರ ಮಾಲಾದಾರಣೆ ನಡೆದು,ಊರಿನ ಪ್ರಮುಖ ಬೀದಿಗಳಲ್ಲಿ ಶ್ರೀ ರಾಮನ ಭಾವ ಚಿತ್ರ ಹಾಗೂ ಪಲ್ಲಕ್ಕಿ ಉತ್ಸವದೊಂದಿಗೆ ಸಂಕೀರ್ಣ ಯಾತ್ರೆ ನಡೆಯಿತು. ನಂತರ ಜೈ ಹನುಮಾನ್ ದೇವಸ್ಥಾನದಲ್ಲಿ ಸತ್ಸಂಗ ಕಾರ್ಯಕ್ರಮ ನಡೆಯಿತು.ಸರ್ವರಿಗೂ ಮಹಾಪ್ರಸಾದ ವ್ಯವಸ್ಥೆ ನಡೆಯಿತು.ಈ ಸಮಯದಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗ ದಳ ದವರು ಭಾಗವಹಿದರು .