ಧಾರವಾಡ ನಗರದ ಆರ.ಎನ.ಶೆಟ್ಟಿ ಕ್ರೀಡಾಂಗಣದಲ್ಲಿ ಪ್ಯಾನ ಇಂಡಿಯಾ ಮಾಸ್ಟರ್ಸ ಗೇಮ ಫೆಡರೇಷನ್ ಹಾಗೂ ಮಾಸ್ಟರ್ಸ್ ಗೇಮ ಅಸೋಸಿಯೇಷನ್ ಆಫ್ ಕರ್ನಾಟಕ ಆಯೋಜಿಸಿದ್ದ 2023ರ ಕರ್ನಾಟಕ ಓಪನ್ ನ್ಯಾಶನಲ್ ಮಾಸ್ಟರ್ಸ್ ಗೇಮ್ ಅಥ್ಲೆಟಿಕ್ ಸ್ಪರ್ಧೆಯಲ್ಲಿ ಹ್ಯಾಮರ ಥ್ರೋದಲ್ಲಿ ಚಿನ್ನದ ಪದಕ ಪಡೆದು ಅಂತರರಾಷ್ಟ್ರೀಯ ಸ್ಪರ್ಧೆಗೆ ಸಂತೋಷ ಭಾವಿ ಆಯ್ಕೆ.
2023ರ ಕರ್ನಾಟಕ ಓಪನ್ ನ್ಯಾಶನಲ್ ಮಾಸ್ಟರ್ಸ್ ಗೇಮನ 30ರ ಮೇಲ್ಪಟ್ಟ ವಯೋಮಾನದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ರಾಯಬಾಗ ತಾಲೂಕಿನ ಹಾಲಶಿರಗೂರ ಗ್ರಾಮದ ಸಂತೋಷ ಭಾವಿ ಹ್ಯಾಮರ ಥ್ರೋದಲ್ಲಿ ಚಿನ್ನದ ಪದಕ, ಡಿಸ್ಕಸ ಥ್ರೋದಲ್ಲಿ ಬೆಳ್ಳಿ ಪದಕ, ಜಾವೇಲಿನ ಥ್ರೋದಲ್ಲಿ ಬೆಳ್ಳಿ ಪದಕ, ಶಾಟಪುಟ್ ಥ್ರೋದಲ್ಲಿ ಬೆಳ್ಳಿ ಪದಕಗಳನ್ನು ಗಳಿಸುವ ಮೂಲಕ ಬರುವ 2024ರ ಮೇ ತಿಂಗಳಲ್ಲಿ ಅಮೇರಿಕಾದ ಕ್ಲೀವ್ ಲ್ಯಾಂಡಿನಲ್ಲಿ ಜರುಗುವ ಅಮೇರಿಕನ್ ಅಂತರರಾಷ್ಟ್ರೀಯ ಮಾಸ್ಟರ್ಸ್ ಗೇಮ್ಸ್ ಗೆ ಆಯ್ಕೆಯಾಗುವ ಮೂಲಕ ಹಾಲಶಿರಗೂರ ಗ್ರಾಮಕ್ಕೆ, ಕುಡಚಿ ಮತಕ್ಷೇತ್ರಕ್ಕೆ ಹಾಗೂ ರಾಯಬಾಗ ತಾಲೂಕಿಗೆ ಕೀರ್ತಿ ತಂದಿದ್ದಾರೆ.