ಹಾರೂಗೇರಿ :ದೇವಸ್ಥಾನದ ಆಭರಣ ಕದ್ದ ಆರೋಪಿಗಳು ಅರೆಸ್ಟ್!

Share the Post Now


ವರದಿ: ಸಂಜೀವ ಬ್ಯಾಕುಡೆ

ಬೆಳಗಾವಿ.
ರಾಯಬಾಗ ತಾಲೂಕಿನ ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು ರೂ.11.52ಲಕ್ಷ ಮೊತ್ತದ ಆಭರಣ ಮಾಲು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಳಗವಾಡಿಯ ಅನೀಲ ದತ್ತವಾಡೆ ಫಿರ್ಯಾದಿ ಹಿನ್ನೆಲೆಯಲ್ಲಿ ಅಕ್ಟೋಬರ್ 05 ರಂದು ಮದ್ಯಾಹ್ನ 1 ಗಂಟೆಯಿಂದ 6 ಗಂಟೆಯ ನಡುವಿನ ವೇಳೆಯಲ್ಲಿ ಅಳಗವಾಡಿ ಗ್ರಾಮದ ಹುಣಸಿಕೋಡಿ ತೋಟದಲ್ಲಿರುವ ಏಳು ಮಕ್ಕಳ ತಾಯಿ ದೇವಸ್ಥಾನದ ಬಾಗಿಲಿಗೆ ಹಾಕಿದ್ದ ಕೀಲಿ ಮುರಿದು ಗುಡಿಯ ಒಳಗಡೆ ಹೊಕ್ಕು ದೇವರ ಮೈಮೇಲೆ ಇದ್ದ 1.26ಲಕ್ಷ ಮೊತ್ತದ 35ಗ್ರಾಂ ಗುಳದಾಳಿ, ಮತ್ತು ಬೋರಮಾಳ,  ಕಿವಿಯಲ್ಲಿಯ ಹೂ,  ಜುಮಕಿ  ಬೆಳ್ಳಿ ಗುಂಡಗಡಿಗೆ, ಬೆಳ್ಳಿ ಕಿರೀಟ,  ಬೆಳ್ಳಿ ಮೂಗುತಿ,  ಬೆಳ್ಳಿ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಹಾರೂಗೇರಿ ಪೊಲೀಸ್ ಠಾಣೆ ಅಪರಾಧ  ದಾಖಲಿಸಿಕೊಂಡು
ಮಾನ್ಯ ಭೀಮಾಶಂಕರ ಗುಳೇದ ಪೊಲೀಸ್ ಅಧೀಕ್ಷಕರು ಬೆಳಗಾವಿ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಮಾನ್ಯ ಕು. ಶೃತಿ. ಎನ್. ಎಸ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬೆಳಗಾವಿ ಜಿಲ್ಲೆ ಹಾಗೂ ಮಾನ್ಯ ಆರ್. ಬಿ. ಬಸರಗಿ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬೆಳಗಾವಿ ಜಿಲ್ಲೆ. ಮತ್ತು ಮಾನ್ಯ ಪ್ರಶಾಂತ ಮುನ್ನೋಳ್ಳಿ, ಪೊಲೀಸ್ ಉಪಾಧೀಕ್ಷಕರು ಅಥಣಿ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ ರವಿಚಂದ್ರ. ಡಿ. ಬಿ. ಸಿಪಿಐ ಹಾರೂಗೇರಿ ವೃತ್ತ ಮತ್ತು ಮಾಳಪ್ಪ ಪೂಜಾರಿ. ಪಿಎಸ್‌ಐ (ಕಾ&ಸು) ಹಾರೂಗೇರಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿ ಜನರು ತಂಡ ರಚನೆ ಮಾಡಿ ಶೀಘ್ರವಾಗಿ ಪ್ರಕರಣವನ್ನು ಬೇದಿಸಿ ಕಳ್ಳತನ 4 ಜನ ಆರೋಪಿತರಿಗೆ ಅಪರಾಧಿಗಳು ರಾಯಬಾಗ ತಾಲೂಕಿನ ದಿಗ್ಗೇವಾಡಿಯ 1.ಶಿವರಾಜ ಸುಭಾಸ ಕಾಂಬಳೆ ( 32) ,ಕಂಚಕಾರವಾಡಿಯ ರುದ್ರೇಶಕುಮಾರ ಶಿವಚಂದ್ರ ಕಾಂಬಳೆ,(31), ನಿಡಗುಂದಿಯ
ರಾಮಪ್ಪ ಲಕ್ಷ್ಮಣ ಕಾಂಬಳೆ(33) ಹಾಗೂ ಮುಗಳಖೋಡದ ಹಣಮಂತ ಮಹಾದೇವ ಕಾಂಬಳೆ(30)  ದಸ್ತಗೀರಿ ಮಾಡಿ, ಅವರಿಂದ ಅಳಗವಾಡಿ, ಬಸ್ತವಾಡ, ಮುಗಳಖೋಡ, ಹಿಡಕಲ್, ಹಾರೂಗೇರಿ, ನಿಡಗುಂದಿ. ಮತ್ತು ಸತ್ತಿ  ಸೇರಿ 140ಗ್ರಾಂ ರೂ. 10.29ಲಕ್ಷ ಬಂಗಾರ ಆಭರಣಗಳು ಹಾಗೂ 43 ಗ್ರಾಂ ರೂ. 3500/- ರೂ ಬೆಳ್ಳಿ ಆಭರಣಗಳನ್ನು ಹಾಗೂ ಕಳ್ಳತನ ಮಾಡಲು ಉಪಯೋಗಿಸಿದ ರೂ. 1.20ವಕ್ಷ ಮೊತ್ತದ ಹೊಂಡಾ ಯನಿಕಾರ್ನ ಮೋಟಾರ ಸೈಕಲ  ಸೇರಿದಂತೆ ಒಟ್ಟು ರೂ. 11.52ಲಕ್ಷ  ಕಿಮ್ಮತ್ತಿನ ಮಾಲನ್ನು ವಶಪಡಿಸಿಕೊಂಡಿರುತ್ತಾರೆ.



ಇದರಲ್ಲಿಯ ದಸ್ತಗೀರ ಆದ ಆರೋಪಿತರು ಈ ಹಿಂದೆ ನಡೆದ ಅಳಗವಾಡಿ, ಬಸ್ತವಾಡ. ಮುಗಳಖೋಡ, ಹಿಡಕಲ್, ಹಾರೂಗೇರಿ, ನಿಡಗುಂದಿ, ಮತ್ತು ಸತ್ತಿ ಗ್ರಾಮಗಳಲ್ಲಿಯ ಒಟ್ಟು 8 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ ಬಗ್ಗೆ ತನಿಖೆಯಿಂದ ತಿಳಿದು ಬಂದಿರುತ್ತದೆ.

ತನಿಖಾ ತಂಡದ ನೇತೃತ್ವವನ್ನು  ರವಿಚಂದ್ರ. ಡಿ. ಬಿ. ಸಿಪಿಐ ಹಾರೂಗೇರಿ ವೃತ್ತ ಮತ್ತು  ಮಾಳಪ್ಪ ಪೂಜಾರಿ. ಪಿಎಸ್‌ಐ(ಕಾ&ಸು) ಹಾರೂಗೇರಿ ಪೊಲೀಸ್ ಠಾಣೆ. ಬಿ. ಎಲ್. ಹೊಸಟ್ಟಿ. ರಮೇಶ ಮುಂದಿನಮನಿ.  ಎ. ಎಸ್. ಶಾಂಡಗೆ.  ಪಿ. ಎಮ್. ಸಪ್ತಸಾಗರ. ಎಚ್. ಆರ್. ಅಂಬಿ. ಹಾರೂಗೇರಿ ಪೊಲೀಸ್ ಠಾಣೆ. ಮತ್ತು  ವಿನೋದ ಠಕ್ಕಣ್ಣವರ. ಟೇಕ್ನಿಕಲ್ ಸೇಲ್ ಪೊಲೀಸ್ ಅಧೀಕ್ಷಕರ ಕಛೇರಿ ಬೆಳಗಾವಿ. ರವರು ಪತ್ತೆ ಕಾರ್ಯನಿರ್ವಹಿಸಿದ್ದು, ಪತ್ತೆ ಕಾರ್ಯ ನಿರ್ವಹಿಸಿದ ಎಲ್ಲ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಜನರಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಬೆಳಗಾವಿ ಜಿಲ್ಲೆರವರು ಶ್ಲಾಘಿಸಿದರು.

Leave a Comment

Your email address will not be published. Required fields are marked *

error: Content is protected !!