ಬೆಳಗಾವಿ
ರಾಯಬಾಗ : ಮೊಹರಂ ಹಬ್ಬದ ನಿಮಿತ್ಯ ಬಂದೋಬಸ್ತ್ ನಲ್ಲಿದ ಹಾರೂಗೇರಿ ಠಾಣೆಯ ಸಿಂಬಂದಿಗಳು ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ರಾತ್ರಿ ಸುಮಾರು 10 ಗಂಟೆಗೆ ಹಾರೂಗೇರಿ ಕ್ರಾಸ್ ನಲ್ಲಿ ಟಾಟಾ ಎಸಿ ಮಿನಿ ಗುಡ್ಸ್ ಗಾಡಿಯನ್ನು ತಡೆದು ತಪಾಸಣೆ ಮಾಡಿದಾಗ ಹಲವು ಬ್ಯಾಟರಿಗಳನ್ನು ನೋಡಿ ಸಂಶಯಗೊಂಡು ಇಬ್ಬರು ಜನರನ್ನು ಪೊಲೀಸರು ಠಾಣೆಗೆ ಕರೇತಂದು ವಿಚಾರಣೆ ನಡೆಸಿದಾಗ 138000. ರೂ ಗಳ ಬೆಲೆಬಾಳುವ 12ಬ್ಯಾಟರಿಗಳನ್ನು ಕದ್ದಿರುವುದಾಗಿ ಹಾಗೂ ಈ ಕೃತ್ಯದಲ್ಲಿ ಇನ್ನು ಮೂರು ಜನರು ಇದ್ದಾರೆ ಎಂದು ಒಪ್ಪಿಕೊಂಡಿದ್ದಾರೆ
ಈ ಸಂದರ್ಭದಲ್ಲಿ ಕಳ್ಳತನ ಮಾಡಲು ಉಪಯೋಗಿಸಿದ 2ಲಕ್ಷ ಬೆಲೆ ಬಾಳುವ (ಟಾಟಾ ಎಸಿ ) ಮಿನಿ ಗುಡ್ಸ್ ವಾಹನವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ
ಈ ಕಾರ್ಯಾಚರಣೆಯಲ್ಲಿ ಹಾರೂಗೇರಿ ಠಾಣೆಯ ಸಿಪಿಐ ರವಿಚಂದ್ರ ಡಿ ಬಿ. ಪಿಎಸ್ಐ ಗಿರಿಮಲಪ್ಪ ಉಪ್ಪಾರ. ಕ್ರೈಮ್ ಪಿಎಸ್ಐ. ಆರ್ ಆರ್ ಕಂಗನೋಳ್ಳಿ.ಪಿಎಸ್ಐ ಸಿ ಡಿ. ಗಂಗಾವತಿ. ಸಿಂಬದಿಗಳಾದ ಆರ್. ಪಿ ಕಟಗೇರಿ. ಸಾಗರ್ ಕಾಂಬಳೆ. ಬಿ ಎಲ್ ಹೊಸಟ್ಟಿ. ಎಚ್ ಆರ್ ಅಂಬಿ.ಪಿ ಎಮ್ ಸಪ್ತಸಾಗರ. ಜಿ ಎನ್ ಕಾಗವಾಡ. ವಿನೋದ್ ಠಕ್ಕಣವರ .ಈ ಎಲ್ಲ ಸಿಂಬಂದಿ ಅದಿಕಾರಿ ವರ್ಗದವರನ್ನು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಸಂಜೀವ್ ಪಾಟೀಲ್ ಹೆಚ್ಚುವರಿ ವರಿಷ್ಟಧಿಕಾರಿ ಎಮ್. ವೇಣುಗೋಪಾಲ್ ಡಿವೈಎಸ್ಪಿ ಶ್ರೀಪಾದ ಜಲ್ದೆ ಅವರು ಅಭಿನಂದಿಸಿದ್ದಾರೆ