ಬೆಳಗಾವಿ,
Editor:kareppa s kamble
ಪಾರೂಗೇರಿ: ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಖನದಾಳ ಗ್ರಾಮದ ಶಾಂತವ್ವ ಭೂಪಾಲ್ ಆಜೂರೇ ಇತಳು ಹಾರೂಗೇರಿ ಠಾಣೆಗೆ ನನ್ನ ಪತಿ ಬುಪಾಲ್ ಆಜೂರೇ ಯನ್ನು ನಾಲ್ಕು ಜನ ಕಾರು ಗಾಡಿಯಲ್ಲಿ ಬಂದು ಮಾರಾಕಾಸ್ತ್ರಗಳನ್ನು ತೋರಿಸಿ ಅಪಹರಿಸಿ 15 ಲಕ್ಷ ರೂಪಾಯಿ ಗಳನ್ನು ಪಡೆದುಕೊಂಡು ಇನ್ನು 30ಲಕ್ಷ ರೂಪಾಯಿ ಗಳ ಬೇಡಿಕೆಯನ್ನು ಇಟ್ಟಿದ್ದಾರೆ ಒಂದು ವೇಳೆ ಹಣ ಕೊಡದೆ ಹೋದರೆ ಜೀವ ತಗೆಯುವ ದಮಕಿ ಹಾಕಿದ್ದಾರೆ ರಎಂದು ದೂರನ್ನು ನೀಡಿರುತ್ತಾಳೆ ಈ ಪ್ರಕರಣವನ್ನು ದಾಖಲಿಸಿಕೊಂಡ ಹಾರೂಗೇರಿ ಪೊಲೀಸರು ಹಂತಕರ ಹೇಡೆಮುರಿ ಕಟ್ಟಲು ಸಜ್ಜಾಗಿದ್ದಾರೆ
ಸ್ಪೆಷಲ್ ಟೀಮ್ : ಮಾನ್ಯ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಪಾಟೀಲ್, ಎಮ್ ವೇಣುಗೋಪಾಲ್ ಹೆಚ್ಚುವರಿ ಪೊಲೀಸ ಅಧ್ಯಕ್ಷರು ಬೆಳಗಾವಿ ಜಿಲ್ಲೆ, ಮಾನ್ಯ ಶ್ರೀ ಶ್ರೀಪಾದ ಜಲ್ದೆ ಡಿಎಸ್ ಪಿ ಅಥಣಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ
ಹಾರೂಗೇರಿ ಪೊಲೀಸ್ ಠಾಣೆಯ ಸಿಪಿಐ ರವಿಚಂದ್ರ ಡಿ. ಬಿ, ಮತ್ತು ಅಥಣಿ, ಕುಡಚಿ, ಕಾಗವಾಡ ಪೊಲೀಸರ ಪ್ರಕಾರ ತನಿಖೆ ಕೈಗೊಂಡು ನಾಲ್ಕುಜನ ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಪ್ರಕರಣದ ಆರೋಪಿಗಳು 1)ವಾಸುದೇವ ಸಹದೇವ್ ನಾಯಕ್ ಸಾ!! ಖನದಾಳ,2) ಭುಜಂಗ ತುಕಾರಾಂ ಜಾಧವ,3)ಈರಯ್ಯ ಸಾತಯ್ಯ ಹಿರೇಮಠ್ ಚಿಕ್ಕೋಡಿ ತಾಲೂಕ ಸಾ!! ಕೆರೂರ್ 4) ಶಿವಾನಂದ್ ನಾನಪ್ಪ ಸೋಲಕಾನ ಅಥಣಿ ತಾಲೂಕ ನಂದಗಾಂವ ಇತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕೊಡಲಾಗಿದೆ
ಮಗನ ಕೊಲೆ : ಹಂತಕರು ಹಣದ ಆಸೆಗೆ ಬಿದ್ದು ಭೂಪಾಲ ಅವರ ಮಗನನ್ನು ಅಪಹರಿಸಿ ಕೊಲೆ ಮಾಡಿ ಹೆಣವನ್ನು ಸಾಕ್ಸಿ ನಾಶಕ್ಕಾಗಿ ತೆಗ್ಗಿನಲ್ಲಿ ಮುಚ್ಚಿಹಾಕಿದ್ದಾರೆ ಎಂದು ತನಿಖೆ ವೇಳೆ ತಿಳಿದು ಬಂದಿದೆ
ಕಳೆದ ಸೆ. 6 ರಂದು ಬನದಾಳ ಗ್ರಾಮದ ಆಜೂರೆ ಅವರ ಮನೆಗೆ ನುಗ್ಗಿ ಮಾರಕಾಸ್ತ್ರ
ತೋರಿಸಿ ಬೆದರಿಸಿ ಒಂದು ಜೆಸಿಬಿ, ಎರಡು ಮೊಬೈಲ್, ಹಣ, ಒಂದು ಬೈಕ್ ದರೋಡೆ ಮಾಡಿದ್ದರು. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎರಡೂ ಪ್ರಕರಣಗಳ ಬೆನ್ನು ಹತ್ತಿದ ಹಾರೂಗೇರಿ, ಕುಡಚಿ, ಅಥಣಿ ಪೊಲೀಸರು ಕೊನೆಗೂ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಎರಡು ಅಪಹರಣ, ಕೊಲೆ ಪ್ರಕರಣ ಭೇದಿಸಿ ಪ್ರಮುಖ ಆರೋಪಿ ಹಾಗೂ ಅವನ ನಾಲ್ಕು ಜನ ಸಹಚರರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಕಾರು, ಮಾರುತಿ alto ಕಾರು, ಎರಡು ಮಾರಕಾಸ್ತ್ರಗಳು, ಒಂದು ಕಪ್ಪು ಸ್ಟಿಕ್ಕರ್ ಹಾಕಿದ ಚಾ 7 ಫೋನ್ ಹಾಗೂ 4 ಲಕ್ಷ 10 ಸಾವಿರ ರೂ. ನಗದು ಹಣ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಮೇಲೆ 20ಕ್ಕೂ ಹೆಚ್ಚು ಪ್ರಕಾರಣಗಳ್ಳಲ್ಲಿ ಭಾಗಿ : ರಾಯಬಾಗ, ಜಮಖಂಡಿ,ಆಲಮೇಲ್,ಚಿಕ್ಕೋಡಿ,ಬೆಳಗಾವಿ, ಘಟಪ್ರಭಾ, ಗೋಕಾಕ,ಮುರಗೋಡ, ಕಟಕೋಳ ,ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳಲ್ಲಿ ಹೀಗೆ ಒಟ್ಟು ಸುಮಾರು 20 ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಯಿಸಿಕೊಂಡ ತಿಳಿದು ಬಂದಿದ್ದು ಸದ್ಯ ಆರೋಪಿತನು ಗೋಕಾಕ ಉಪ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರುತ್ತಾನೆ.
ಈ ಪ್ರಕರಣ ಬೇದಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ವಿವರ,
1) ಶ್ರೀ ಶ್ರೀಪಾದ ಅಲ್ಲೆ, ಪೊಲೀಸ್ ಉಪಾಧೀಕ್ಷಕರು ಅಥಣಿ, 2) ಶ್ರೀ ರವಿಂದ್ರ ನಾಯ್ಕ, ಸಿಪಿಐ ಅಥಣಿ 3) ಶ್ರೀ ರವಿಚಂದ್ರ, ಡಿ.ಐ, ಸಿಪಿಐ ಹಾರೂಗೇರಿ, 4) ಶ್ರೀಮತಿ ರೇಣುಕಾ, ಎಮ್. ಜಕನೂರ, ಪಿಎಸ್‌ಐ (ಕಾಸು) ಹಾರೂಗೇರಿ, 5) ಶ್ರೀ ಪಿ.ಬಿ. ಪೂಜಾರಿ, ಪಿಎಸ್(ಅ.ಎ) ಹಾರೂಗೇರಿ, 5) ಶ್ರೀ ಎಸ್. ಎಲ್. ಬಾಡಕರ ಎಎಸ್‌ಐ, 7) ಶ್ರೀ. ಕೆ. ಆರ್. ಸಾಳವಂಕಿ ಎಎಸ್‌ಐ, 8) ಪಿ.ಬಿ.ನಾಯಕ, 9) ವಿ. ಎನ್. ಗಾಯಕವಾಡ, 10) ಆರ್. ಪಿ. ಕಬೇಕರಿ, 11) ಎಮ್. ಎಸ್. ಪಾಟೀಲ 12) ಎ. ಎ. ಶಾಂಡಗೆ, 13) ಅಮೀರ ಡಾಂಗೆ. 14) ಜಿ. ಎಲ್. ಹೋಸಟ್ಟ. 15) ಪ್ರಕಾಶ ಖವಟಕೋಪ್ಪ, 16) ಎ. ಎ, ಈರಕರ, 17) ಬಸವರಾಜ ತಳವಾರ, 18) ಸೋಮನಾಥ ಹಲಕಿ 19) ದೀಪಕ ಕಾಂಬಳೆ 20) .ಸದಾಶಿವ ದಾಬೋ೪ 21) ಅರ್ಜುನ ಬಾಡಗಿ 22) ಆರ್.ಎಸ್.ಲೋಹಾರ 23) ಎಚ್. ಆರ್. ಅಂಬಿ 24) ಗಜಾನನ ಸಾಂವಗಾಂವ 25) ಬನ್ನಪ್ಪ ಖೋತ 26) ಮಹಾವೀರ ಪಾಟೀಲ 27) ಜಿ. ಎ. ಹಾವರಡ್ಡಿ 28) ಐ.ಕೆ. ಖಾಜಿ. 29) ಎಸ್.ಕೆ. ಅಸ್ತಿ 30) ಎ. ಎನ್. ಮಸರಗುಪ್ಪಿ 32) ಆರ್. ಬಿ., ಖಾನಾಪೂರೆ, 33) ಸಂಗಣಗೌಡ ಚೌದರಿ, 34) ವಿಶ್ವನಾಥ ದೊಡಮನಿ, (ಚಾಲಕ) 35) ವಿನೋದ ಠಕ್ಕಣ್ಣವರ, 36) ಪ್ರಶಾಂತ ಆಲಮಟ್ಟ ಜೀಪ್ ಡ್ರೈವರ 37) ನಂದೆವಾಲೆ ಜೀಪ್‌ಡ್ರೈವರ್ 38) ಕುಮಾರ ಪವಾರ,
ರಕ್ಷಣೆ : ಅಪಹರಣಕ್ಕೊಳಗಾದ ಭೂಪಾಲ ಆಜೂರೆ ಅವರನ್ನು ರಕ್ಷಿಸಿದ್ದಾರೆ.ಈ ಕಾರ್ಯಾಚರಣೆಯಲ್ಲಿ ಶ್ರಮವಹಿಸಿದ ಪೊಲೀಸ್ ತಂಡಕ್ಕೆ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ
ಎಸ್ ಪಿ ಯವರ ಮನವಿ :ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇದ್ದರು ಯಾರಾದರೂ ಹೆಚ್ಚಿನ ಬಡ್ಡಿಗೆ ಸಾಲ ನೀಡಿ ಕಿರುಕುಳ ನೀಡುತ್ತಿದ್ದರೆ ಕೂಡಲೇ 112ಗೇ ಕರೆ ಮಾಡಿ ಇಲ್ಲವಾದರೆ ಹತ್ತಿರದ ಪೊಲೀಸ್ ಠಾಣೆಗೇ ದೂರು ನೀಡಬೇಕು ಎಂದರು ಮತ್ತು ಯಾರೇ ಆಗಲಿ ಧಮ್ಕಿ ಹಾಕುವುದು ಮಾಡಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು