ಬೆಳಗಾವಿ.ರಾಯಬಾಗ
ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಶ್ರೀ ವಿಠ್ಠಲ ದೇವಸ್ಥಾನದಲ್ಲಿ ದಿನಾಂಕ 13.03.2023ರಿಂದ 20.03.2023 ವರೆಗೆ ಜರುಗಿದ 53ನೇ ಸಪ್ತಾಹ ಮತ್ತು ಶ್ರೀ ಗ್ರಂಥರಾಜ ಜ್ಞಾನೇಶ್ವರೀ ಪಾರಾಯಣ ಹಾಗೂ ಅಖಂಡ ಹರಿನಾಮ ಸಪ್ತಾಹ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ ಹಾಗೂ ಭಕ್ತಿಯಿಂದ ಜರುಗಿ, ಆಧ್ಯಾತ್ಮ ಹೊಂಗಿರಣಗಳ ಮೂಲಕ ಸುಗಮವಾಗಿ ಸಂಪನ್ನವಾಯಿತು.ಈ ಸಮಾರಂಭದ ಅಂಗವಾಗಿ ಇಂದು ಪಟ್ಟಣದ ಹನುಮಾನ ಮಂದಿರದಲ್ಲಿ ಭಜನೆ, ಕೀರ್ತನೆ ಜರುಗಿದವು.ಅನೇಕ ದಾನಿಗಳಿಂದ ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಸದ್ಭಕ್ತ ಮಂಡಳಿಯ ವತಿಯಿಂದ ದಿನಂಪ್ರತಿ ಅನ್ನಪ್ರಸಾದ ಜರುಗಿತು. ಬೆಳಗ್ಗೆ 4 ರಿಂದ 6ರವರೆಗೆ ಕಾಕಡಾರತಿ ಮತ್ತು ಭೂಪಾಳಿ, ಮುಂಜಾನೆ ಏಳರಿಂದ ಮಧ್ಯಾಹ್ನ 11:30ವರೆಗೆ ಶ್ರೀಗಂಧರಾಜ ಜ್ಞಾನೇಶ್ವರಿ ಪಾರಾಯಣ ಮತ್ತು 11:30 ಯಿಂದ 12:30ಗೆ ಹರಿಪಾಠ, ಸಾಯಂಕಾಲ 4 ರಿಂದ 5 ರವರೆಗೆ ಪ್ರವಚನ, ಸಂಜೆ 7ರಿಂದ 9ರವರೆಗೆ ಹರಿ ಕೀರ್ತನೆ ಮತ್ತು ಜಾಗರಣೆ ಜರುಗಿ ಬಂದ ಭಕ್ತರಿಗೆ ಭಕ್ತಿಯ ಸಂಕೀರ್ತನದ ಹರುಷ ನೀಡಿತು.ಜಾತ್ರೆಯಲ್ಲಿ ಪಾಲ್ಗೊಂಡ ಕೀರ್ತನಕಾರರಿಗೆ, ಸಂತರಿಗೆ, ದಾಸಸೇವೆಯಲ್ಲಿ ನಿರತರಾದವರಿಗೆ ವಸ್ತ್ರ ದಾನ ಮಾಡಲಾಯಿತು.ಕೊನೆಯ ದಿನವಾದ ಇಂದು ಊರಿನ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಜರುಗಿತು.ಈ ಸಂದರ್ಭದಲ್ಲಿ ಮಾರುತಿ ಧರ್ಮಟ್ಟಿ, ಶಿವಗೊಂಡ ಧರ್ಮಟ್ಟಿ, ಪ್ರಧಾನಿ ಧರ್ಮಟ್ಟಿ, ಗೋಪಾಲ್ ಧರ್ಮಟ್ಟಿ, ಜ್ಞಾನೇಶ್ವರ ಧರ್ಮಟ್ಟಿ, ವಸಂತ ಧರ್ಮಟ್ಟಿ, ಸದಾಶಿವ ಧರ್ಮಟ್ಟಿ,ಪಾಂಡುರಂಗ ಧರ್ಮಟ್ಟಿ, ಬಸವರಾಜ್ ಮುಗಳಿಹಾಳ, ಕೃಷ್ಣಾ ಸಿಂಗಾಡೆ, ವಿಠ್ಠಲ್ ಕರಾತ,ಬಾಬು ಸನದಿ, ಡಾ. ಶಿರುಗುಪ್ಪಿ ಮುಂತಾದವರು ಉಪಸ್ಥಿತರಿದ್ದರು.
ವರದಿ : ಸುನೀಲ್ ಕಬ್ಬೂರ