ಬೆಳಗಾವಿ.ರಾಯಬಾಗ:~* ಯೋಗ ಉಚಿತ ಆರೋಗ್ಯ ಖಚಿತ ಎಂಬ ದಿವ್ಯ ಸಂದೇಶದೊಂದಿಗೆ ಪತಂಜಲಿ ಯೋಗ ಸಮಿತಿ ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿ ಇವರ ನೇತೃತ್ವದಲ್ಲಿ 9 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ಯ ತಾಲೂಕಿನ ಹಾರೂಗೇರಿ ಪಟ್ಟಣದ ಶ್ರೀ ಚೆನ್ನವೃಷಬೆಂದ್ರ ಲೀಲಾ ಮಠದ ಸಭಾಂಗಣದಲ್ಲಿ ಯೋಗ ಮತ್ತು ಪ್ರಾಣಾಯಾಮ ಪ್ರಶಿಕ್ಷಣ ಉಚಿತ ಶಿಬಿರ ಮಂಗಳವಾರ ದಿನಾಂಕ 20 ರಿಂದ ಗುರುವಾರ ದಿನಾಂಕ 22 ರವರೆಗೆ ಮೂರು ದಿನಗಳ ಪರ್ಯಂತ ಪ್ರತಿನಿತ್ಯ ಬೆಳಿಗ್ಗೆ 5 ರಿಂದ 7 ರವರೆಗೆ ಆಯೋಜಿಸಲಾಗಿದೆ. ಆಸಕ್ತರು ಈ ಉಚಿತ ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಿಬಿರದ ಮುಖ್ಯ ಆಯೋಜಕರು ಹಾಗೂ ಪತಂಜಲಿ ಯೋಗ ಸಮಿತಿ ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿಯ ಜಿಲ್ಲಾಧ್ಯಕ್ಷರು ಹಾಗೂ ಶಿಕ್ಷಕ ಶ್ರೀ ಸಂಭಾಜಿ ನಿಂಬಾಳಕರ ಪ್ರಕಟಣೆಯಲ್ಲಿ ತಿಳಿಸಿರುವರು. ಹೆಚ್ಚಿನ ಮಾಹಿತಿಗೆ 9448174501 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ವರದಿ:~ಡಾ.ಜಯವೀರ ಎ.ಕೆ*.
*ಖೇಮಲಾಪುರ*





