ಬೆಳಗಾವಿ.ರಾಯಬಾಗ: ಕನ್ನಡ ಸಾಹಿತ್ಯ ಪರಿಷತ್ತುˌ ರಾಯಬಾಗದ ವತಿಯಿಂದ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿಯ ವಿಶ್ವಭಾರತಿ ಪ್ರೌಢಶಾಲೆಯಲ್ಲಿ ನಾಳೆ ಶನಿವಾರ ದಿನಾಂಕ 21-10-2023 ರಂದು ಹೊತ್ತಾರೆ 10 ಗಂಟೆಗೆ “ಸ್ವರ ಸಂಗಮ; ಭಾವ ಸಂಭ್ರಮ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಯೆಂದು ಕ.ಸಾ.ಪ ತಾಲೂಕಾಧ್ಯಕ್ಷ ರವೀಂದ್ರ ಪಾಟೀಲ ತಿಳಿಸಿದ್ದಾರೆ.ಕಾರ್ಯಕ್ರಮದ ಪ್ರಧಾನ ಅತಿಥಿಗಳಾಗಿ ಮಲ್ಲಿಕಾರ್ಜುನ ಮನಸೂರ ಅವರ ಮೊಮ್ಮಗಳು ಶ್ರೀಮತಿ ಕರುಣಾ ಸಿಂಗ್ ಆಗಮಿಸಲಿದ್ದು ಶ್ರೀ ಅರವಿಂದ ಸಿಂಗ್ˌ
ಶ್ರೀ ನಿರಂಜನ ಬಡಿಗೇರ ದಿಗ್ದರ್ಶಕರಾಗಿ ಮಾರ್ಗದರ್ಶನ ಮಾಡಲಿದ್ದಾರೆ. ಶ್ರೀ ಉಮೇಶ ಬಾಳಿಕಾಯಿ ಕಾರ್ಯಕ್ರಮ ಉದ್ಘಾಟಿಸಲಿದ್ದು ಶ್ರೀ ಎಮ್.ಎಸ್.ಸಾವಡಕರ ಅಧ್ಯಕ್ಷತೆ ವಹಿಸಲಿದ್ದಾರೆ.ಶಾರದಾ ಅಂಗಡಿˌಸುವರ್ಣಾ ಬಡಿಗೇರˌಅಶ್ವೀನಿ ಹೊಸಪೇಟಿˌಸ್ವಾತಿ ಕಿಡದಾಳˌಅಮೃತಾ ಒಂಟೆˌ ಪದ್ಮರಾಜ ಆಳಪ್ಪನವರ ˌವಿಠ್ಠಲ ತೇರದಾಳೆˌಮಂಜುನಾಥ ಟೊಣಪೆˌಕೆ.ಎಸ್.ಭಜಂತ್ರಿ ಮೊದಲಾದ ಉದಯೋನ್ಮುಖ ಹಿರಿಯ ಗಾಯಕ ಗಾಯಕಿಯರಿಂದ ಸುಗಾನಸುಧೆ ಚಿಮ್ಮಲಿದೆ. ಸುಖದೇವ ಕಾಂಬಳೆˌತಿಮ್ಮಪ್ಪ ದಾಸಪ್ಪನವರˌವಿಠ್ಠಲ ಜೋಡಟ್ಟಿˌ ಸಂತೋಷ ತಮದಡ್ಡಿˌ ವಾಣಿ ಚೌಗಲಾˌಎಮ್.ಎಸ್.ಬಳವಾಡˌಶಂಕರ ಕ್ಯಾಸ್ತಿ ˌಶ್ರೀಧರ ಹೊಳಕರರವರು ಹಾಡುಗಳ ಭಾವ ಸೌಂದರ್ಯ ಪ್ರಸ್ತುತಪಡಿಸಲಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರುˌಪದಾಧಿಕಾರಿಗಳುˌ ಸಂಗೀತಾಭಿರುಚಿಯುಳ್ಳವರು ಆಗಮಿಸಬೇಕೆಂದು ವಿನಂತಿಸಲಾಗಿದೆ.ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಗಾನ ಗೋಷ್ಠಿ’ ಆಯೋಜಿಸಿ ಗಾಯಕರನ್ನು ಗುರುತಿಸಿ ಬೆಳಕಿಗೆ ತರಲು ಸದರಿ ಕಾರ್ಯಕ್ರಮ ಪೂರಕವಾಗುತ್ತದೆ. ಗಾಯಕ ಗಾಯಕಿಯರು ತಮ್ಮ ಪರಿಚಯ ಮಾಡಿಕೊಳ್ಳಲು ಕಾರ್ಯಕ್ರಮದಲ್ಲಿ ಹಾಜರಿರಬೇಕೆಂದು ಆಶಿಸಿದ್ದು ಕನ್ನಡ ಮನಸ್ಸುಗಳು ಕಾರ್ಯಕ್ರಮದ ಸವಿ ಆಸ್ವಾದಿಸಬೇಕೆಂದು ಸವಿನಯದಿಂದ ಕ.ಸಾ.ಪ.
ತಾಲೂಕಾಧ್ಯಕ್ಷ ಆರ್.ಎಂ ಪಾಟೀಲ ಬಿನ್ನಹಿಸಿದ್ದಾರೆ.
*ವರದಿ:ಡಾ.ಜಯವೀರ ಎ.ಕೆ.*
*ಖೇಮಲಾಪುರ*