ವರದಿ:ಕೆ. ಎಸ್. ಕಾಂಬ್ಳೆ
ಹಾರೂಗೇರಿ ಪಟ್ಟಣದಲ್ಲಿ ಯಾರು ಹೇಳುವವರಿಲ್ಲ ಕೇಳುವರಿಲ್ಲ
ಬೆಳಗಾವಿ.
ಹೌದು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಪ್ರತಿ ಬುಧವಾರ ದೊಡ್ಡ ಪ್ರಮಾಣದಲ್ಲಿ ಸಂತೆ ನಡೆಯುತ್ತದೆ ತಾಲೂಕಿನಾದ್ಯಂತ ಹಲವಾರು ಗ್ರಾಮಗಳಿಂದ ಜನರು ಆಗಮಿಸ್ತಾರೆ
ಹಾರೂಗೇರಿ ಪಟ್ಟಣದ ರಾಯಬಾಗ ಮಾರ್ಗವಾಗಿ ಹೋಗುವ ರಸ್ತೆಯ ಮೇಲೆ ಜಾನುವಾರಗಳಾದ ಟಗರು ಆಡು ಮೇಕೆ ಕುರಿ ತೆಗೆದುಕೊಳ್ಳುವುದು ಮತ್ತು ಮಾರಾಟ ಮಾಡಲಾಗುತ್ತದೆ ಆದರೆ ರಸ್ತೆ ಮೇಲೆಯ ಮಾರಾಟ ಮಾಡುವುದರಿಂದ ಸಂಚಾರ ದಟ್ಟನೆ ಉಂಟಾಗಿ ಒಂದರಿಂದ ಎರಡು ಗಂಟೆಗಳ ಕಾಲ ಟ್ರಾಫಿಕ್ ಜಾಂಬ್ ಆಗಿ ಸಾವಿರಾರು ಪ್ರಯಾಣಿಕರು ವಿದ್ಯಾರ್ಥಿಗಳು ಪರದಾಡುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ
ಪಟ್ಟಣದಲ್ಲಿ 10 ಹೆಚ್ಚು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಿದ್ದು ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ರೋಗಿಗಳು ಹಾರೂಗೇರಿ ಪಟ್ಟಣದ ಮೇಲೆ ಅವಲಂಬಿತರಾಗಿದ್ದಾರೆ ಒಂದು ವೇಳೆ ಮೆಡಿಕಲ್ ಎಮರ್ಜೆನ್ಸಿ ಇದ್ದಾಗ ಇಂತಹ ಟ್ರಾಫಿಕ್ ಸಮಸ್ಯೆ ಆದಾಗ ಪ್ರಾಣ ಹಾನಿ ಆಗುವುದು ಗ್ಯಾರಂಟಿ
ಅಭಿಷೇಕ್ ಪಾಂಡೆ, ಪುರಸಭೆ ಮುಖ್ಯಧಿಕಾರಿ,: ಮಾರುಕಟ್ಟೆಗೆ ಸೂಕ್ತ ಸ್ಥಳ ಹುಡುಕುತ್ತಿದ್ದೇವೆ ಹಾರೂಗೇರಿ ಪಟ್ಟಣದಲ್ಲಿ ಪ್ರತಿ ಬುಧವಾರ ಜಾನುವಾರಗಳ ಸಂತೆ ಇರುವದರಿಂದ ಸಂಚಾರ ದಟ್ಟನೆ ಆಗುವದು ನಮ್ಮಗಮನಕ್ಕೆ ಇದೆ ಪೊಲೀಸ್ ಇಲಾಖೆಯಿಂದ ಬಂದೋ ಬಸ್ತ್ ನಿಂದ ಅದನ್ನು ನಿಯಂತ್ರಣ ಮಾಡಲಾಗುವುದು ಪುರಸಭೆ ಅಧ್ಯಕ್ಷರೊಂದಿಗೆ ಚರ್ಚಿಸಿ ಸೂಕ್ತ ಸ್ಥಳದ ವ್ಯವಸ್ಥೆ ಮಡಲಾಗುವುದು
ಪುರಸಭೆ ಮತ್ತು ಪೊಲೀಸ್ ಇಲಾಖೆಯ ಗಮನಕ್ಕೆ :ಪಟ್ಟಣದಲ್ಲಿ 20-30 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆ ಗಳು ಇದ್ದು ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ದಿನನಿತ್ಯ ಹಾರೂಗೇರಿ ಪಟ್ಟಣಕ್ಕೆ ಆಗಮಿಸುತ್ತಾರೆ ಕೆಲವು ವರ್ಷಗಳ ಹಿಂದೆ ಅಪಘಾತಗಳು ಸಂಭವಿಸಿ ಹಲವು ವಿದ್ಯಾರ್ಥಿಗಳು ಮೃತ ಪಟ್ಟು ಬಾಲಕರ ಪೋಷಕರಿಂದ ಹಿಡಿಶಾಪ ಹಾಕಿರುವುದು ಬಹುಷಃ ಕೆಲವರು ಮರತಿರಬಹುದು
ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಜನಪ್ರತಿನಿದಿನಗಳು ಈ ಬಗ್ಗೆ ಗಮನಹರಿಸಿ ಪಟ್ಟಣದಲ್ಲಿ ಮುಂದೆ ಅಪಾಯ ಆಗುವ ಮುಂಚೆ ಎಚ್ಚೆತ್ತುಕೊಂಡ ಜಾನುವಾರುಗಳ ಮಾರಾಟ ಮಾಡಲು ಹಾಗೂ ತೆಗೆದುಕೊಳ್ಳಲು ಸೂಕ್ತ ಮಾರುಕಟ್ಟೆಯ ವ್ಯವಸ್ಥೆ ಆಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ





