ವರದಿ: ಸಂತೋಷ ಮುಗಳಿ
ಮುಗಳಖೋಡ: ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹಾವೇರಿ ಜಿಲ್ಲೆ ಬ್ಯಾಡಗಿಯಲ್ಲಿ ನಡೆದ ವಿಭಾಗ ಮಟ್ಟದ (ಪ್ರೌಢಶಾಲಾ ಬಾಲಕಿಯರ) ಕಬಡ್ಡಿ ಪಂದ್ಯಾವಳಿಯಲ್ಲಿ ಪಟ್ಟಣದ ಶ್ರೀ ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆ ಬಾಲಕಿಯರು ಗೆಲುವು ಸಾಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆಯನ್ನು ಮಾಡಿದ್ದಾರೆ.
ಬೆಳಗಾವಿ ವಿಭಾಗ ಮಟ್ಟದಲ್ಲಿ ಜರುಗಿದ 9 ಜಿಲ್ಲೆಯಿಂದ ಇಲಾಖಾ ಕ್ರೀಡಾಕೂಟದಲ್ಲಿ ಒಟ್ಟು 9 ತಂಡಗಳು ಪಾಲ್ಗೊಂಡಿದ್ದು , ಅದರಲ್ಲಿ ಬೆಳಗಾವಿ , ಚಿಕ್ಕೋಡಿ, ಬಾಗಲಕೋಟ, ವಿಜಯಪುರ, ಗದಗ, ಕಾರವಾರ, ಧಾರವಾಡ, ಉತ್ತರ ಕನ್ನಡ , ಶಿರಸಿ ತಂಡಗಳು ಪಾಲ್ಗೊಂಡು ಕಬಡ್ಡಿ ಆಟದಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದರು. ಅದರಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ತಂಡವನ್ನು ಪ್ರತಿನಿಧಿಸಿದ್ದ ಮುಗಳಖೋಡ ಪಟ್ಟಣದ ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆ ಬಾಲಕಿಯರು ಮೊದಲ ಸುತ್ತಿನಲ್ಲಿ ಗದಗ ತಂಡದ ವಿರುದ್ಧ 17 ಅಂಕ ಪಡೆದು, ಸೆಮಿ ಫೈನಲ್ ನಲ್ಲಿ ಹಾವೇರಿ ಬಾಲಕಿಯರ ತಂಡದ ವಿರುದ್ಧ 24 ಅಂಕಗಳ ಅಂತರದಿಂದ ಫೈನಲ್ ನಲ್ಲಿ ಧಾರವಾಡ ತಂಡದ ವಿರುದ್ಧ 06 ಅಂಕಗಳ ಭರ್ಜರಿ ಗೆಲುವು ಸಾಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ .
ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆಯ ಕಬಡ್ಡಿ ವಿದ್ಯಾರ್ಥಿನಿಯರಾದ ಸೌಂದರ್ಯ ಹಿಪ್ಪರಗಿ, ಮೈತ್ರಾ ರಗಟಿ, ವೈಷ್ಣವಿ ಸಾವಳಿ,ಮಾಯವ್ವ ಬೆಳ್ಳಕ್ಕಿ, ಪೂಜಾ ಹಿರೇಮಠ, ತಮ್ಮ ಉತ್ತಮ ಆಟದ ಪ್ರದರ್ಶನದಿಂದಾಗಿ ಜನರ ಚಪ್ಪಾಳೆ, ಶಿಳ್ಳೆ ಗಿಟ್ಟಿಸಿಕೊಂಡಿದ್ದಾರೆ.
ಇನ್ನುಳಿದ ಆಟಗಾರರಾದ ಜ್ಯೋತಿ ಕಾಮಾಣಿ, ಭಾಗ್ಯಾ ಬೆಳ್ಳಕ್ಕಿ, ಶ್ರೀದೇವಿ ಯಡವನ್ನವರ, ಸುಹಾಸಿನಿ ಅರಭಾವಿ, ರಶಿತಾ ದೇಸಾಯಿ, ಲಕ್ಷ್ಮಿ ಪೂಜೇರಿ, ಸಾವಿತ್ರಿ ತೂಗದೆಲೆ,ಅವರ ಸಾಂಘೀಕವಾಗಿ ಆಟವಾಡಿದ್ದರಿoದ ಗೆಲುವಾಯಿತೆoದು ಕಬಡ್ಡಿ ತರಬೇತುದಾರ ಬಸವರಾಜ ಬಂಡಿಗಣಿ ಅಭಿಮಾನದಿಂದ ಹೇಳುತ್ತಿದ್ದಾರೆ. ವಿಜೇತ ವಿದ್ಯಾರ್ಥಿಗಳಿಗೆ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣವರ ಪ್ರಶಸ್ತಿ ಪತ್ರ ಹಾಗೂ ಟ್ರೋಫಿ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಕ್ರೀಡಾಧಿಕಾರಿಗಳು ಇದ್ದರು.
ಅದ್ದೂರಿ ಸ್ವಾಗತ: ವಿಭಾಗ ಮಟ್ಟದಲ್ಲಿ ಗೆದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರು ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆಯಿಂದ ತೆರೆದ ವಾಹನದ ಮೂಲಕ ಗ್ರಾಮಸ್ಥರು ಅವರನ್ನು ಪುಷ್ಪವೃಷ್ಟಿ ಮಾಡಿ ಸಿಹಿ ಹಂಚಿ , ಪಟಾಕಿ ಸಿಡಿಸಿ, ಗುಲಾಲು ಎರಚಿ ಸಂಭ್ರಮಿಸಿದರು. ನಂತರ ವಿದ್ಯಾರ್ಥಿಗಳನ್ನು ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ಬಸ್ ನಿಲ್ದಾನ ಮಾರ್ಗವಾಗಿ ಗಣಪತಿ ದೇವಸ್ಥಾನಕ್ಕೆ ಹಾಗೂ ಶ್ರೀಯಲ್ಲಾಲಿಂಗೇಶ್ವರ ಮುಕ್ತಿಮಂದಿರಕ್ಕೆ ಬೇಟ್ಟಿ ನೀಡಿ ದರ್ಶನ ಆಶೀರ್ವಾದ ಪಡೆದರು.
ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ವಿರುಪಾಕ್ಷಿ ಕರಡಿಮಠ, ಕಾಲೇಜು ಪ್ರಾಚಾರ್ಯ ಎಸ್ ಜಿ ಹಂಚಿನಾಳ, ಕಬಡ್ಡಿ ತರಬೇತಿದಾರ ಬಿ.ಬಿ.ಬಂಡಿಗಣಿ, ಟೀಮ್ ಮ್ಯಾನೇಜರ ಶೋಭಾ ಡವಳೇಶ್ವರ, ವಿದ್ಯಾರ್ಥಿಗಳ ಪಾಲಕರಾದ ಸಂಗಮೇಶ ಹಿರೇಮಠ, ಬೀರಪ್ಪ ಹಿಪ್ಪರಗಿ, ಬೀರಪ್ಪ ದುಂಡಗಿ, ಸಿದ್ದು ಕುರಿಮನಿ, ಭರಮು ಬೆಳ್ಳಕ್ಕಿ ಸೇರಿದoತೆ ಶಾಲಾ ಆಡಳಿತ ಮಂಡಳಿ ಮತ್ತು ಪ್ರೌಢಶಾಲೆ ಹಾಗೂ ಕಾಲೇಜು ಸಿಬ್ಬಂದಿ ವರ್ಗ, ಕಬಡ್ಡಿ ಕ್ರೀಡಾ ಅಭಿಮಾನಿಗಳು ಪಟ್ಟಣದ ಗುರು- ಹಿರಿಯರು ಇದ್ದರು .
” ಪಾಲಕರ ಸಹಾಯ ಸಹಕಾರ ಮತ್ತು ವಿದ್ಯಾರ್ಥಿಗಳು ತರಬೇತಿಯಲ್ಲಿ ಪಾಲ್ಗೊಳ್ಳುವಿಕೆ, ಕಬಡ್ಡಿ ತರಬೇತಿದಾರ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಬಂಡಿಗಣಿ ಅವರ ಉತ್ತಮ ತರಬೇತಿ, ಸೂಕ್ತ ಮಾರ್ಗದರ್ಶನದ ರಾತ್ರಿ ಹಗಲು ಎನ್ನದೆ ಶ್ರಮಿಸಿದ ಫಲವಾಗಿ ಇಂದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಇದು ಖುಷಿ ತಂದಿದೆ. ಇದೇ ರೀತಿಯಾಗಿ ರಾಜ್ಯಮಟ್ಟದಲ್ಲಿ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲಿ ”
ಅಶೋಕ ಕೊಪ್ಪದ
ಪ್ರಧಾನ ಕಾರ್ಯದರ್ಶಿ
ಶ್ರೀ ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆ . ಮುಗಳಖೋಡ.