ಬೆಳಗಾವಿ, ಸಂದೇಶ
ವರದಿ: ಶ್ರೀ ಪ್ರಕಾಶ ಚ ಕಂಬಾರ
ಹಂದಿಗುಂದ: ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಷಟಸ್ಥಳ ಧ್ವಜಾರೋಹಣವನ್ನು ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಅಲ್ಲಮ ಪ್ರಭು ಮಹಾಸ್ವಾಮಿಗಳು ನೆರವೇರಿಸಿದರು
ಸಿದ್ದೇಶ್ವರ ಮಠದ ಪೀಠಾಧಿಪತಿ ಶಿವಾನಂದ ಮಹಾಸ್ವಾಮಿಗಳು ಪಾವನ ಸಾನಿಧ್ಯ ವಹಿಸಿದರು. ಶೇಗುಣಸಿ ವಿರಕ್ತಮಠದ ಮಹಾಂತಪ್ರಭು ಮಹಾಸ್ವಾಮಿಗಳು, ಗುರುದೇವ ದೇವರು, ಡಾ ವಿವೇಕಾನಂದ ದೇವರು, ಶ್ರೀ ಮಠದ ಅರ್ಚಕರಾದ ಗುರುಲಿಂಗಯ್ಯ ಮಠದ, ಜಿ.ಪಂ ಮಾಜಿ ಸದಸ್ಯ ರಾಮನಗೌಡ ಪಾಟೀಲ , ಪ್ರಗತಿಪರ ರೈತ ಬನಪ್ಪ ತೇಲಿ, ನಿವೃತ್ತ ಶಿಕ್ಷಕ ಬಿ ಆರ್ ಆಜೂರೆ ಸಿದ್ದೇಶ್ವರ ಕನ್ನಡ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಿ .ಪಿ. ಮಠ, ಉದ್ಯಮಿ ಷಣ್ಮುಖ ತೇರದಾಳ, ನ್ಯಾಯವಾದಿ ಸುರೇಶ ಹೊಸಪೇಟಿ, ಶಿವಪ್ಪ ಹೊಸೂರ, ಶಿಕ್ಷಕ ಪ್ರಭು ಹಿರೇಮಠ , ಬಿ.ಎಸ್ ಕರಾಳೆ ಭಕ್ತರು ಇದ್ದರು .