ಡಾ. ಜಯವೀರ ಎ. ಕೆ. ಹಾಗೂ ಪ್ರೊ ವಂಟಮೂರೆ ಅವರಿಗೆ ಗೌರವ ಸಮ್ಮಾನ

Share the Post Now

ಬೆಳಗಾವಿ.


ರಾಯಬಾಗ: ಶನಿವಾರ ದಿ. 8 ರಂದು ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ಯ ಹಮ್ಮಿಕೊಂಡ ಸಾಹಿತಿ ಡಾ. ಜಯವೀರ ಎ. ಕೆ. ಹಾಗೂ ಕವಿ ಪ್ರೊ ಎಲ್ ಎಸ್ ವಂಟಮೂರೆ ಅವರು ಸಂಪಾದಿಸಿದ “ಭೂಮಿ ತೂಕದ ಹೆಣ್ಣು” ಚೊಚ್ಚಿಲ ಕವನ ಸಂಕಲನದ ಲೋಕಾರ್ಪಣೆ ಸಮಾರಂಭದಲ್ಲಿ ಭೂಮಾತಾ ಪ್ರಕಾಶನದ ಕವಿ, ಶಿಕ್ಷಕ ಎಂ ಕೆ ಶೇಖ್ ಹಾಗೂ ಕವಿಯತ್ರಿ ಡಾ. ರತ್ನಾ ಬಾಳಪ್ಪನವರ ಅವರು ಉಭಯ ಸಂಪಾದಕರನ್ನು ಅಭಿಮಾನದಿಂದ ಶಾಲು ಹೊದಿಸಿ ಗ್ರಂಥ ನೀಡಿ ಸತ್ಕರಿಸಿ ಗೌರವಿಸಿದರು.


ಪ್ರೊ ಶಿವಾನಂದ ಬೆಳಕೂಡ ನ್ಯಾಯವಾದಿ ಡಿ ಎಚ್ ಯಲ್ಲಟ್ಟಿ, ಡಾ. ಬಿ ಎಂ ಪಾಟೀಲ, ಶ್ರೀಶೈಲ ಶಿರೂರ ಪ್ರೊ ಪಿ ಬಿ ಮುನ್ಯಾಳ, ಸಾಗರ ಝೆ0ಡೆನ್ನವರ ಶಿಕ್ಷಕಿ ರೇಖಾ ಗುಪ್ತೆ ಮತ್ತಿತರ ಗಣ್ಯಮಹೋದಯರು ವೇದಿಕೆಯ ಮೇಲೆ  ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!