ರಾಯಬಾಗ:* ಶರಣ ತತ್ವ ಪ್ರಚಾರಕ್ಕಾಗಿ ಕೊಡುಗೆ ನೀಡಿದ ಬಸವ ಸಮಿತಿಯ ರಾಜ್ಯ ಅಧ್ಯಕ್ಷರು, ನಿಜಶರಣ ಶ್ರೀ ಅರವಿಂದ ಜತ್ತಿ ಅವರಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಅಕ್ಟೋಬರ್ 30 ರಂದು ಬೆಳಿಗ್ಗೆ ನಡೆಯುವ 73 ನೇ ಘಟಿಕೋತ್ಸವದಲ್ಲಿ ಘನತೆವೆತ್ತ ರಾಜ್ಯಪಾಲರು ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಿದ್ದಾರೆ.
ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಶರಣಜೀವಿ ಶ್ರೀ ಅರವಿಂದ ಜತ್ತಿ ಅವರು ಅನೇಕ ವರುಷಗಳಿಂದ ಬಸವಾದಿ ಶರಣರ ತತ್ವಗಳನ್ನು ತಮ್ಮ ನಿಜ ಜೀವನದಲ್ಲಿ ಮೈಗೂಡಿಸಿಕೊಂಡು ಇಡೀ ತಮ್ಮ ಬದುಕನ್ನು ಬಸವ ತತ್ವ ಪ್ರಸರಣ ಹಾಗೂ ಅನುಷ್ಠಾನಕ್ಕೆ ಮೀಸಲಿರಿಸಿದ್ದು ಗಮನಾರ್ಹ. ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಶ್ರೀ ಅರವಿಂದ ಜತ್ತಿ ಅವರನ್ನು ಖೇಮಲಾಪುರದ ಕನ್ನಡ ಪ್ರಾಧ್ಯಾಪಕರು, ಸಾಹಿತಿ ಶರಣಜೀವಿ. ಡಾ.ಜಯವೀರ ಎ.ಕೆ. ರಾಯಬಾಗ ತಾಲ್ಲೂಕು ಕ.ಸಾ.ಪ.ಅಧ್ಯಕ್ಷ ಆರ್.ಎಂ.ಪಾಟೀಲ ಶರಣ ವಿಚಾರ ವಾಹಿನಿಯ ಸಂಸ್ಥಾಪಕ ಅಧ್ಯಕ್ಷ ನಿಜಶರಣರಾದ ಶ್ರೀ ಆಯ್.ಆರ್.ಮಠಪತಿ ಹಾಗೂ ಮತ್ತಿತರರು ತುಂಬು ಹೃದಯದಿಂದ ಅಭಿನಂದಿಸಿದ್ದಾರೆ.
ವರದಿ:ಡಾ.ಜಯವೀರ ಎ.ಕೆ.*
*ಖೇಮಲಾಪುರ*