ಪ್ರತಿ ವರ್ಷ ಎರಡೂವರೆ ಲಕ್ಷ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ: ಸಚಿವ ಶಿವರಾಜ್ ತಂಗಡಗಿ

Share the Post Now



ಬೆಳಗಾವಿ

ಪ್ರತಿ ವರ್ಷ ಎರಡೂವರೆ ಲಕ್ಷ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ‌ ಶಿವರಾಜ್ ತಂಗಡಗಿ ಅವರು ಹೇಳಿದರು.

ಹಿಂದುಳಿದ‌ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಬೆಳಗಾವಿಯ ಸುವರ್ಣಸೌಧದ ಆಡಿಟೋರಿಯಂನಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 150 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರಾರಂಭಕ್ಕೆ ಸಚಿವರು ಆನ್ಲೈನ್ ಮೂಲಕ ಚಾಲನೆ‌ ನೀಡಿ ಮಾತನಾಡಿದರು.



ಪ್ರತಿ ವರ್ಷ ಮೂರು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು  ಹಾಸ್ಟೆಲ್ ಗೆ ಅರ್ಜಿ ಸಲ್ಲಿಸುತ್ತಾರೆ. 2.46,000 ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಉಳಿದ‌ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಡಿ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.

ಹಿಂದುಳಿದ‌ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿಗಳು ರೈತ,‌ ಬಡ ಹಾಗೂ ಕಾರ್ಮಿಕ ಕುಟುಂಬದಿಂದ‌ ಬಂದವರಾಗಿದ್ದು, ಹಾಸ್ಟೆಲ್ ನ ಸೌಲಭ್ಯವನ್ನು ಪಡೆದು ಉನ್ನತ ಹುದ್ದೆಗೇರಬೇಕು. ನಾವು ಓದುವ ಕಾಲಘಟ್ಟದಲ್ಲಿ ನಾಲ್ಕೈದು ಕಿ.ಮೀ ನಡೆದು ಪ್ರೌಢ ಶಾಲೆ ವ್ಯಾಸಂಗ ಮುಗಿಸಿದೆವು. ಆದರೆ ಇಂದು ಸರ್ಕಾರ ಹಾಸ್ಟೆಲ್ ವಸತಿ ಮಾತ್ರವಲ್ಲ. ಮೂಲಸೌಲಭ್ಯ, ಪುಸ್ತಕ, ಗ್ರಂಥಾಲಯದ ವ್ಯವಸ್ಥೆಯನ್ನು ಮಾಡಿದೆ. ಹಾಸ್ಟೆಲ್ ನಲ್ಲಿ ಉತ್ತಮ ಗುಣಮಟ್ಟದ ಆಹಾರ, ಹಾಸ್ಟೆಲ್ ನವೀಕರಣ, ಪುಸ್ತಕ ವಿತರಣೆ, ಗ್ರಂಥಾಲಯದ ವ್ಯವಸ್ಥೆ ಎಲ್ಲವನ್ನು ಕಲ್ಪಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಮಾಜಿ ಮುಖ್ಯಮಂತ್ರಿ ದಿವಗಂತ ಡಿ.ದೇವರಾಜ ಅರಸು ಅವರನ್ನು ನಾವು ನೆನಪು ಮಾಡಿಕೊಳ್ಳಬೇಕು. ಅರಸು ಅವರು ಹಿಂದುಳಿದ‌ ವರ್ಗದವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಇಂದು ನಮ್ಮ ಮುಖ್ಯಮಂತ್ರಿಗಳು ಬಡ,‌ ದೀನ ದಲಿತರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದವರಾಗಿದ್ದಾರೆ.‌ ಈ ರಾಜ್ಯದಲ್ಲಿ ಸಾಮಾಜಿಕ ನ್ಯಾಯದಡಿ ಹೆಜ್ಜೆ ಇಟ್ಟಿರುವ ಮುಖ್ಯಮಂತ್ರಿ ಯಾರಾದರೂ ಇದ್ದಾರೆ ಅದು ಸಿದ್ದರಾಮಯ್ಯ ಅವರು ಮಾತ್ರ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಷ್ಟ ಅನುಭವಿಸಿದವರಿಗೆ ಹಾಸ್ಟೆಲ್ ಜೀವನ ಎಂಬುದು ಗೊತ್ತು. ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು ಎಂಬುದು ಸರ್ಕಾರದ ಉದ್ದೇಶ.‌ ಶ್ರದ್ಧೆಯಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆದು ಸಂಸ್ಕಾರವಂತರಾಗಬೇಕು ಎಂದರು.‌

ವಿದ್ಯಾರ್ಥಿಗಳಿಗೆ ವಾರ್ಡನ್ ಹಾಗೂ ಶಿಕ್ಷಕ್ಷರು‌ ಸೂಕ್ತ  ಮಾರ್ಗದರ್ಶನ ಮಾಡಿದರೆ, ಆ ಮಕ್ಕಳು ಜೀವನ ಪರ್ಯಾಂತ ನಿಮ್ಮನ್ನು ನೆನೆಸುತ್ತಾರೆ. ಇನ್ನು ವಿದ್ಯಾರ್ಥಿಗಳು ಎಷ್ಟು ಎತ್ತರಕ್ಕೆ‌ ಬೆಳೆದ್ರು, ಶಿಕ್ಷಕರಾದವರು ಹಾಗೆಯೇ ಇರುತ್ತಾರೆ. ಹೀಗಾಗಿ ಶಿಕ್ಷಣ ನೀಡಿದ ಶಿಕ್ಷಕ್ಷರನ್ನು ಮರೆಯಬಾರದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಇಲಾಖಾ ಕಾರ್ಯದರ್ಶಿ ಸಂಜಯ್ ಶೆಟ್ಟಣ್ಣನವರ್, ಆಯುಕ್ತರಾದ ಶ್ರೀನಿವಾಸ್,  ಜಂಟಿ ನಿರ್ದೇಶಕರಾದ ಜಿ.ಜಗದೀಶ್, ಡಾ.ಸಿ.ಕೆ.ಜಗದೀಶ್ ಕುಮಾರ್, ಪ್ರದೀಪ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಬಾಕ್ಸ್
*ಇಲಾಖೆಯಿಂದ ಓದು ಮುಂದುವರೆಸಿದ್ದೀನಿ:*
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ ವಿದ್ಯಾರ್ಥಿನಿ ಸ್ವಾತಿ ಮಾತನಾಡಿ, ನಮ್ಮಂತಹ ಲಕ್ಷಾಂತರ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ ನೆರವಾಗಿದೆ. ಕೃಷಿ ಕುಟುಂಬದಿಂದ ಬಂದ ನಮಗೆ ವಿದ್ಯಾಭ್ಯಾಸ ಪಡೆಯುವುದು ದೂರುವಾಗಿತ್ತು. ನಮಗೆ ನಮ್ಮ ಪೋಷಕರು ವಿದ್ಯಾಭ್ಯಾಸ ಬೇಡ ಎಂದು ಹೇಳಿದ್ರು. ಕಾಲೇಜಿಗೆ ಓಡಾಡುವುದೇ ಕಷ್ಟವಾಗಿತ್ತು. ಖಾಸಗಿ ಪಿ.ಜಿ.ಯಲ್ಲಿ ಉಳಿದು ಅದಕ್ಕೆ ಹಣ ಪಾವತಿಸುವುದು ಕಷ್ಟ ಎಂದ ಹೇಳಿದ್ರು‌. ಆದರೆ ನನಗೆ ಇಲಾಖೆಯ ಹಾಸ್ಟೆಲ್ ನಿಂದ ವ್ಯಾಸಂಗಕ್ಕೆ ಅನುಕೂಲವಾಗಿದೆ ಎಂದು ಸಚಿವರು ಹಾಗೂ ಸರ್ಕಾರಕ್ಕೆ ವಿದ್ಯಾರ್ಥಿನಿ ಧನ್ಯವಾದಗಳನ್ನು ತಿಳಿಸಿದರು.

Leave a Comment

Your email address will not be published. Required fields are marked *

error: Content is protected !!