ಬೆಳಗಾವಿ
ವರದಿ :ಸಚಿನ್ ಕಾಂಬ್ಳೆ
ಅಥಣಿ : ಸಾಮಾಜಿಕವಾಗಿ, ಆರ್ಥಿಕವಾಗಿ ಸವಿತಾ (ನಾವ್ಹಿ) ಸಮಾಜದ ಬಲಿಷ್ಠವಾಗಬೇಕು, ಈ ಸಮಾಜದ ಶ್ರೇಯೋಭಿವೃದ್ದಿಗಾಗಿ ನಾನು ಸದಾ ಸಿದ್ದ ಎಂದು ಅಥಣಿ ಶಾಸಕ ಮಹೇಶ ಕುಮಠಳ್ಳಿ ಅವರು ಹೇಳಿದರು.
ಅವರು ಇಂದು ಪಟ್ಟಣದಲ್ಲಿ ಸವಿತಾ(ನಾವ್ಹಿ) ಸಮಾಜಕ್ಕೆ ಸುಮಾರು 5 ಲಕ್ಷ ರೂ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತಾ ಬಸವಣ್ಣನವರು ಹೇಳಿದಂತೆ ಕಾಯಕವೇ ಕೈಲಾಸ ಎಂದು ವೃತ್ತಿಯನ್ನು ಶ್ರದ್ದೆಯಿಂದ ಮಾಡುತ್ತಿರುವ ಸವಿತಾ ಸಮಾಜ ಮಂಚೂಣಿಗೆ ಬರಬೇಕು ಎಂದರು.
ಈ ವೇಳೆ ಪುರಸಭೆ ಸದಸ್ಯ ರಮೇಶ ಪವಾರ, ಅಣ್ಣಪ್ಪ ಭಜಂತ್ರಿ, ತಿಪ್ಪಣ್ಣ ಭಜಂತ್ರಿ, ಕಲ್ಮೇಶ ಮಡ್ಡಿ, ಎಸ್ ಟಿ ಪಾಟೀಲ, ಶಿವಾ ಕ್ಷೀರಸಾಗರ, ರಾಜು ವಾಘಮೋರೆ, ದತ್ತಾ ಕ್ಷೀರಸಾಗರ, ಅಶೋಕ ಕ್ಷೀರಸಾಗರ, ಪರಶುರಾಮ ಚವ್ಹಾಣ, ಪ್ರಕಾಶ ಪನಾಳಕರ, ಪ್ರವೀಣ ಕ್ಷೀರಸಾಗರ, ರಾಜು ಸಾಂವಗಾಂವಕರ, ಮಲ್ಲಿಕಾರ್ಜುನ ಹಂಚಿನಾಳ, ಅರ್ಜುನ ಪವಾರ, ಸೇರಿದಂತೆ ಇತರರಿದ್ದರು.