ಬಿಜೆಪಿ ಹೈಕಮಾಂಡ್ ತನ್ನ ನಿರ್ಧಾರವನ್ನು ಮರುಪರಿಶೀಲಿಸಿ ಬೆಳಗಾವಿ ಉತ್ತರದಿಂದ ಉಮೇದುವಾರಿಕೆ ನೀಡುತ್ತದೆ ಎಂದು ಶಾಸಕ ಅನಿಲ್ ಬೆನಕೆ ವಿಶ್ವಾಸ ವ್ಯಕ್ತಪಡಿಸಿದರು. ಉತ್ತರದಿಂದ ಟಿಕೆಟ್ ಪಡೆದು ಗೆಲ್ಲುತ್ತೇನೆ ಎಂದು ಹೇಳಿದರು.
ಇಂದು ಬೆಳಗ್ಗೆ ತರಾತುರಿಯಲ್ಲಿ ಅನಿಲ್ ಬೆನಕೆ ಬೆಂಗಳೂರಿಗೆ ತೆರಳಿದ್ದು . ಇದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನನಗೆ ಬೇರೆ ಪಕ್ಷಗಳಿಂದ ಚುನಾವಣೆಗೆ ಸ್ಪರ್ಧಿಸುವ ಪ್ರಸ್ತಾಪವಿದೆ. ಆದರೆ ನಾನು ಯಾರೊಂದಿಗೂ ನೇರವಾಗಿ ಚರ್ಚಿಸಿಲ್ಲ. ಜೆಡಿಎಸ್, ಕಾಂಗ್ರೆಸ್ ಜನಾರ್ದನರೆಡ್ಡಿ ಅವರ ಪಕ್ಷಗಳು ನನಗೆ ಟಿಕೆಟ್ ಮಾಡಲು ಸಿದ್ದತೆ ತೋರಿವೆ. ಆದರೆ ನಾನು ಇನ್ನೂ ಯಾರೊಂದಿಗೂ ನೇರವಾಗಿ ಚರ್ಚಿಸಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇಂದು ಬೆಂಗಳೂರಿಗೆ ಬಂದಿದ್ದಾರೆ. ತಮ್ಮ ಹಾಗೂ ಪಕ್ಷದ ಮುಖಂಡರ ಜತೆ ಚರ್ಚಿಸಲು ಬೆಂಗಳೂರಿಗೆ ತೆರಳಿದ್ದು, ಇನ್ನೂ ಕೆಲವು ಕೆಲಸಗಳು ಬಾಕಿ ಇವೆ ಎಂದರು. ಈಗ ಸಮಯ ಬಹಳ ಕಡಿಮೆ ಇದೆ, ನಾಮಪತ್ರ ಭರ್ತಿ ಮಾಡಬೇಕು ಎಂದು ಹೇಳಿದರು.
ಒಟ್ಟಾರೆ, ಬಿಜೆಪಿ ಅಭ್ಯರ್ಥಿಯಾಗಲು ಅನಿಲ್ ಬೆಂಕೆ ಕೊನೆಯ ಕ್ಷಣದವರೆಗೂ ಪ್ರಯತ್ನಿಸುತ್ತಿರುವಂತಿದೆ. ಬೇರೆ ಪಕ್ಷಗಳಿಂದ ಆಫರ್ ಗಳಿವೆ ಎಂದು ಹೇಳುತ್ತಲೇ ಟಿಕೆಟ್ ಪಡೆದು ಗೆಲ್ಲುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಈಗ ಅವರಿಗೆ ಯಾವ ಪಕ್ಷದ ಟಿಕೆಟ್ ಸಿಗುತ್ತದೆ ಎಂದು ಕಾಡು ನೋಡಬೇಕಿದೆ