ಬೆಳಗಾವಿ
ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಶಶಿಧರ ಶಿಂಗೆ ಮಾತನಾಡಿದರು.
ಕುಡಚಿ ಮತಕ್ಷೇತ್ರದ ಬಿಜೆಪಿ ಶಾಸಕ ಪಿ ರಾಜೀವ ಅವರು ಕ್ಷೇತ್ರ ಬದಲಾವಣೆ ಮಾಡುತ್ತಾರೆ ಎಂಬ ಉಹಾಪೋಹದ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಬರುವ ವಿಧಾನಸಭೆ ಚುನಾವಣೆಯಲ್ಲಿ ಕುಡಚಿ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು. ಕೇಂದ್ರದ ಬಿಜೆಪಿ ಪಕ್ಷದ ವರಿಷ್ಠರು ಕುಡಚಿ ಶಾಸಕ ಪಿ ರಾಜೀವರವರಿಗೆ ಬೇರೆ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸೂಚಿಸಿದರೆ ಕುಡಚಿ ಮತಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಹೂರಗಿನವರು ಬಂದು ಚುನಾವಣೆಗೆ ಸ್ಪರ್ಧಿಸಿದರೆ ನಾನು ಬಿಜೆಪಿ ಪಕ್ಷದ ವಿರುದ್ಧವೇ ಬಂಡಾಯವೇದ್ದು ಬಿಜೆಪಿ ಪಕ್ಷವನ್ನು ಸೋಲುಸುತ್ತೆವೆ ಎಂದು ಹೇಳಿದರು.
ಈಗಿನ ಹಾಲಿ ಶಾಸಕರು ಬೇಕಂದ್ರೆ ಕುಡಚಿ ಮತಕ್ಷೇತ್ರದಲ್ಲೆ ಸ್ಪರ್ದಿಸಿದರೆ ಸಂತೋಷವಿದೆ
ಇನ್ನು ಶಾಸಕ ಪಿ ರಾಜೀವ ಅವರು ಹೈಕಮಾಂಡ ಆದೇಶದಂತೆ ಕ್ಷೇತ್ರ ಬದಲಾವಣೆ ಮಾಡಿದರೆ ಸ್ಥಳಿಯ ಕಾರ್ಯಕರ್ತರಿಗೆ ಮನ್ನಣೆ ನೀಡಬೇಕು ಬೇರೆಯವರಿಗೆ ಅವಕಾಶ ನೀಡಬಾರದು ನೀಡಿದರೆ ಬಿಜೆಪಿ ಅಭ್ಯರ್ಥಿ ವಿರುದ್ಧ ಬಂಡಾಯ ಎದ್ದು ನಾನೇ ಚುನಾವಣೆಗೆ ಸ್ಪರ್ಧಿಸುತ್ತೇನೆ ಶಾಸಕ ಪಿ ರಾಜೀವ ಅವರೊಂದಿಗೆ ಆರು ವರ್ಷಗಳಿಂದ ಬಿಜೆಪಿ ಪಕ್ಷಕ್ಕಾಗಿ ದುಡಿಯುತ್ತಿದ್ದೆನೆ ಎಂದು ಹೇಳಿದರು.