ಬೆಳಗಾವಿ: ಕೊಲ್ಹಾಪುರ ವೃತ್ತದ ಶಿವಾ ಹೋಟೆಲಿನ ಎದುರಿಗೆ, ಬಿಜೆಪಿ ಪಕ್ಷದ ಬೆಳಗಾವಿಯ ವಿಭಾಗೀಯ ಮಟ್ಟದ ಮಾಧ್ಯಮ ಕೇಂದ್ರದ ಉದ್ಘಾಟನೆ ಅತೀ ಸಂಭ್ರಮದಿಂದ ಜರುಗಿದೆ..
ಬಿಜೆಪಿಯ ರಾಷ್ಟ್ರೀಯ ವಕ್ತಾರರಾದ ಹಾಗೂ ರಾಜ್ಯಸಭಾ ಸದಸ್ಯರಾದ
*ಸುಧಾoಶ ತ್ರಿವೇದಿ* ಅವರು ತಮ್ಮ ಅಭಯಹಸ್ತದಿಂದ ಈ ಕಚೇರಿಯನ್ನು ಉದ್ಘಾಟನೆ ಮಾಡಿ, ಸುದುಗೋಷ್ಟಿಯಲ್ಲಿ ಮಾತನಾಡಿದರು..
ಈ ವಿಭಾಗೀಯ ಮಾದ್ಯಮ ಕೇಂದ್ರ, ಬೆಳಗಾವಿ ನಗರ ಮತ್ತು ಗ್ರಾಮೀಣ, ಚಿಕ್ಕೋಡಿ, ಬಾಗಲಕೋಟೆ, ಹಾಗೂ ವಿಜಯಪುರ ಜಿಲ್ಲೆಗಳನ್ನು ಒಳಗೊಂಡಂತೆ ಈ ಮಾದ್ಯಮ ಕೇಂದ್ರ ಕಾರ್ಯ ನಿರ್ವಹಿಸುತ್ತದೆ ಎಂದರು..
ದೇಶದ ಸ್ವಾತಂತ್ರ ಹಾಗೂ ಸಮೃದ್ಧಿಯಲ್ಲಿ ಬೆಳಗಾವಿಯ ಹಾಗೂ ರಾಜ್ಯದ ತ್ಯಾಗ ಬಲಿದಾನ ಬಹಳ ಇದೆ, ದೇಶ ನಿರ್ಮಾಣದಲ್ಲಿ ಈ ನಾಡಿನ ಮಹಾಪುರುಷರ ಕೊಡುಗೆ ಅಪಾರ ಎಂದರು..
ವಿದೇಶದಲ್ಲಿ ಪ್ರಧಾನ ಮಂತ್ರಿ ಅವರ ಅವಹೇಳನ ಮಾಡುತ್ತಿರುವ ಕಾಂಗ್ರೆಸ್ಸಿಗರು, ದೇಶದ ಅವಮಾನ ಮಾಡುತ್ತಿದ್ದಾರೆ, ಆದ್ದರಿಂದ ಎಲ್ಲಾ ಪ್ರಜೆಗಳಿಗೆ ನಾವು ವಿನಂತಿ ಮಾಡಿಕೊಳ್ಳುವುದೆಂದರೆ, ಪ್ರಧಾನಿ, ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಉತ್ತಮ ಬೆಳವಣಿಗೆ ಆಗುತ್ತಿದೆ, ಆದ ಕಾರಣ ಎಲ್ಲರೂ ಬಿಜೆಪಿ ಪಕ್ಷದೊಂದಿಗೆ ಸಾಗೋಣ, ದೇಶವನ್ನು ಬೆಳೆಸೋಣ ಎಂದರು..
ಇನ್ನು ಈ ಕಾರ್ಯಕ್ರಮ ಹಾಗೂ ಪತ್ರಿಕಾಗೋಷ್ಟಿಯಲ್ಲಿ ಕೇಂದ್ರ ವಕ್ತಾರ ಮತ್ತು ನಾಯಕರೊಂದಿಗೆ, ರಾಜ್ಯ ವಕ್ತಾರರಾದ ಎಂ ಬಿ ಜಿರಲಿ, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಉತ್ತರ ಮತಕ್ಷೇತ್ರದ ಅಭ್ಯರ್ಥಿ ರವಿ ಪಾಟೀಲ್, ಜಿಲ್ಲಾ, ತಾಲೂಕು, ಮಂಡಲ ಮಟ್ಟದ ಪದಾಧಿಕಾರಿಗಳು, ಮಾಜಿ ಶಾಸಕ ಸಂಜಯ ಪಾಟೀಲ, ಹಾಗೂ ನಗರ ಸೇವಕರು ಭಾಗಿಯಾಗಿದ್ದರು..