ಹಳ್ಳೂರ
ಮೂಡಲಗಿ ತಾಲೂಕಿನ ವಡೇರಟ್ಟಿ ಗ್ರಾಮದ ವ್ಯಾಪ್ತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಶುದ್ಧ ಗಂಗಾ ಘಟಕದ ಉದ್ಘಾಟನಾ ಕಾರ್ಯಕ್ರಮವನ್ನು ಊರಿನ ಗಣ್ಯರಾದ ಶ್ರೀಯುತ ಚಂದ್ರಕಾಂತ್ ಮೋಟೆಪ್ಪಗೊಳ ಹಾಗು ಜಿಲ್ಲಾ ನಿರ್ದೇಶಕರಾದ ನಾಗರತ್ನ ಹೆಗಡೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಅಥಣಿ ಜಿಲ್ಲೆಯ ಗೌರವಾನ್ವಿತ ನಿರ್ದೇಶಕರಾದ ನಾಗರತ್ನ ಹೆಗಡೆಯವರು ಯೋಜನೆಯಿಂದ ಸಾಕಷ್ಟು ರೀತಿಯ ಸೌಲಭ್ಯಗಳಿವೆ ಹಾಗು ಶುದ್ಧ ಕುಡಿಯುವ ನೀರಿನ ಘಟಕದ ಗ್ರಾಮಸ್ಥರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ತಾಲೂಕಿನ ಯೋಜನಾಧಿಕಾರಿಗಳಾದ ರಾಜು ನಾಯ್ಕ.ಶುದ್ಧ ಗಂಗಾ ಘಟಕದ ಮೇಲ್ವಿಚಾರಕರಾದ ಅಣ್ಣಪ್ಪ ಬಾರಕೇರ . ವಲಯದ ಮೇಲ್ವಿಚಾರಕರಾದ ಮಂಜುಳಾ ಹಿರೇಮಠ. ಕಾರ್ಯಕ್ಷೇತ್ರದ ಎಸ್ ಪೀ ಗಳು. ಊರಿನ ಗಣ್ಯರಾದ ರೆಬ್ಬೊಜಿ ಮಳೀವಡೇರ. ಕಾಣು ಹೋಳ್ಕರ.ನಾಗಪ್ಪ ಪಾಟೀಲ.ಗ್ರಾಮದ ಸರ್ವ ಸದಸ್ಯರು ಒಕ್ಕೂಟದ ಪದಾಧಿಕಾರಿಗಳಿದ್ದು ಸಂಘದ ಸದಸ್ಯರು ಮತ್ತು ಮುದ್ದು ಮಕ್ಕಳು ಭಾಗವಹಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.