ಕೆ.ಜೆ.ಸೊಮೈಯಾ ಶಾಲೆಯಲ್ಲಿ ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

Share the Post Now

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣ ಮತ್ತು ಶಿಸ್ತು ಬಹಳ ಮುಖ್ಯ: ಸೈನಿಕ ಮಹದೇವಪ್ಪ ತಳ್ಳಿ

ವರದಿ: ಸಂತೋಷ ಮುಗಳಿ

ಮುಗಳಖೋಡ : ಸಮೀಪದ ಸಮೀರವಾಡಿಯ ಕೆ.ಜೆ ಸೋಮೈಯಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ.17 ರಂದು ಸಹಪಠ್ಯ ಚಟುವಟಿಕೆಗಳ (ಸಿಸಿಎ) ಉದ್ಘಾಟನಾ ಸಮಾರಂಭ ಮತ್ತು ಶಾಲಾ ಸಂಸತ್ತ್ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. 



ಮಹದೇವಪ್ಪ ತಳ್ಳಿ ಭಾರತೀಯ ಸೇನೆ ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಪ್ರಮುಖ ಪಾತ್ರ ವಹಿಸುತ್ತದೆ. ಶಾಲೆಯಲ್ಲಿ ಶಿಕ್ಷಣದ ಜೊತೆಗೆ ಉತ್ತಮ ಮೌಲ್ಯಗಳನ್ನು ನೀಡುತ್ತದೆ. ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಕೊಂಡು ದೇಶದ ಉತ್ತಮ ಪ್ರಜೆ ಆಗಿ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಶಿಕ್ಷಣ ಮತ್ತು ಶಿಸ್ತಿನ ಬಗ್ಗೆ ಕಿವಿಮಾತು ಹೇಳಿದರು.

ನಂತರ ನೂತನವಾಗಿ ಶಾಲಾ ವಿದ್ಯಾರ್ಥಿ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲ ಅನಿಲಕುಮಾರ ಸಿ ಅಭಿನಂದಿಸಿದರು. ಚುನಾಯಿತ ಶಾಲಾ ಮುಖ್ಯಸ್ಥರು ಕಿರಿಯರಿಗೆ ಮಾದರಿಯಾಗಬೇಕೆಂದು ಸಲಹೆ ನೀಡಿದರು ಮತ್ತು ಶಾಲೆಯಲ್ಲಿ ಕಾರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುವಂತೆ ಮತ್ತು ಶಾಲೆಯ ಅಭಿವೃದ್ಧಿಗೆ ಸಲಹೆಗಳನ್ನು ನೀಡುವಂತೆ ತಿಳಿಸಿದರು. 

ಶಾಲಾ ನಾಯಕಿ ಕು.ಸಿಂಚನಾ ಬ್ಯಾಳಿ, ಶಾಲಾ ಉಪನಾಯಕ ಕು. ಶ್ರೇಯಸ್ ಗೋಳಪ್ಪನವರ್, ಸಿಸಿಎ ನಾಯಕಿ ದೀಪ್ತಿ ಯೆಕ್ಕೆಲಿ, ಉಪನಾಯಕಿ ಸಂಜನಾ ಲಂಗೋಟಿ, ಕ್ರೀಡಾ ನಾಯಕ ಸಂಗಮೇಶ ತೇರದಾಳ, ಉಪನಾಯಕಿ ಸಾಕ್ಷಿ ತೆಲಸಂಗ, ಶಿಸ್ತಿನ ನಾಯಕಿ ನಮ್ರತಾ ಕೋಷ್ಠಿ, ಉಪನಾಯಕ ವೆಂಕಟೇಶ್ ವಾಸನದ. ಅಸೆಂಬ್ಲಿ ನಾಯಕಿ ಶ್ವೇತಾ ವಂಟಗುಡಿ ಮತ್ತು ಉಪನಾಯಕಿ ಅಂಕಿತಾ ನಾಗಮೋತಿ, ಆಂಗ್ಲ ವಲಯದ ನಾಯಕಿ ಶ್ರೇಯಾ ಬಟಕುರ್ಕಿ ಮತ್ತು ಉಪನಾಯಕಿ ಶ್ರದ್ಧಾ ವಂಟಗುಡಿ, ಶಾಲಾ ವೀಕ್ಷಕ ವಿದ್ಯಾರ್ಥಿನಿಯರಾದ ಅಂಕಿತಾ ಪಾಟೀಲ್, ಈಶ್ವರ ಸಜ್ಜನ್ ಹಾಗೂ ಶಾಲೆಯ ಗಿರ್ ಲೈನ್ಸ್ , ಹೇಮಿಸ್ ಸ್ನೋ ಲೇಪಾರ್ಡ್ಸ್, ಪೆರಿಯಾರ್ ಏಲಿಫಂಟ್ಸ್, ಕಾಜಿರಂಗ ರೈನೋಸ್ ಹಾಗೂ ಕನ್ಹ ಟೈಗರ್ಸ್ ಎಂಬ ಐದು ಹೌಸನ ಮುಖ್ಯಸ್ಥರುಗಳು, ವಿದ್ಯಾರ್ಥಿ ನಾಯಕರು -ನಾಯಕಿಯರು ಪ್ರಮಾಣ ವಚನ ಸ್ವೀಕರಿಸಿದರು.

ಈ ಸಂದರ್ಭದಲ್ಲಿ 6ನೇ ತರಗತಿಯ ವಿದ್ಯಾರ್ಥಿಗಳು ಸ್ವಾಗತ ನೃತ್ಯ ಪ್ರದರ್ಶಿಸಿದರು. ದೀಕ್ಷಾ, ಭಕ್ತಿ, ಸಿದ್ಧಾರ್ಥ್ ಮತ್ತು ನಿಶಾಂತ್ ಕಾರ್ಯಕ್ರಮವನ್ನು ನಿರೂಪಿಸಿದರು .

ವಿದ್ಯಾರ್ಥಿ ಪದಗ್ರಹಣ ಮತ್ತು ಸಹಪಠ್ಯ ಚಟುವಟಿಕೆಯ ಉದ್ಘಾಟನಾ ಸಮಾರಂಭದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!