ವರದಿ :ಸುನಿಲ್ ಕಬ್ಬುರ್
ಹಾರೂಗೇರಿ : ಸ್ಥಳೀಯ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಅಭಿವೃದ್ಧಿಯ ಕೀರ್ತಿ ಗಳಿಸಿರುವ,ಹೆಸರಾಂತ ವೈದ್ಯಕೀಯ ಶಿಕ್ಷಣ ಸಂಸ್ಥೆಯಾದ ಶ್ರೀ ಎಸ್ ಎಸ್ ಜಂಬಗಿ ಮೆಮೋರಿಯಲ್ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ನ ಶ್ರೀ ಸಿದ್ಧಿವಿನಾಯಕ ಗ್ರಾಮೀಣ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ನೂತನ ಕಟ್ಟಡವನ್ನು ಇಂದು ಕುಡಚಿ ಶಾಸಕರು ಹಾಗೂ ತಾಂಡಾ ಅಭಿವೃದ್ಧಿ ನಿಗಮದಧ್ಯಕ್ಷ ಪಿ.ರಾಜೀವ್ ಹಾಗೂ ವಾಲ್ಮೀಖಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರಾಮಣ್ಣ ಗಸ್ತಿಯವರು ಉದ್ಘಾಟನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ. ಎಲ್ ಎಸ್ ಜಂಬಗಿ, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಡಾ. ವರ್ಷಾ ಜಂಬಗಿ,ಮಕ್ಕಳ ತಜ್ಞ ಡಾ.ಗಿರೀಶ ನಾರಗೊಂಡ,ಡಾ. ಮೃತ್ಯುಂಜಯ ನಾರಗೊಂಡ,ಪ್ರಮುಖರಾದ ಡಾ. ರಾಜು ಪಾಟೀಲ,ಪ್ರಕಾಶ್ ಬದ್ನಿಕಾಯಿ ಮತ್ತಿತರರು ಉಪಸ್ಥಿತರಿದ್ದರು.