ಬೆಳಗಾವಿ
ಮಹಿಳೆಯರು ಎಲ್ಲಾ ರಂಗದಲ್ಲಿ ಅಭಿವೃದ್ಧಿ ಹೊಂದಲಿ: ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ
ಬೆಳಗಾವಿ: “ಪ್ರತಿಯೊಬ್ಬ ಮಹಿಳೆಯರು ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು” ಎಂದು ಧಾರವಾಡ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲಿಯಾನ ಹೇಳಿದರು
ಅನಗೊಳ ಗ್ರಾಮದ ಆದಿನಾಥ ಸಭಾಭವನದಲ್ಲಿ
ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,
ಬಿಸಿ ಟ್ರಸ್ಟ್ ಬೆಳಗಾವಿ ತಾಲೂಕು ಮಹಿಳಾ ಜ್ಞಾನವಿಕಾಸ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ಸಾಧನಾ ಸಮಾವೇಶ ಮತ್ತು ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,
ಮಹಿಳೆಯರು ದೃಢ ನಿರ್ಧಾರ ಮಾಡಬೇಕಿದೆ. ಜೀವನದಲ್ಲಿ ತಾವು ಬೆಳೆದು ಇನ್ನೊಬ್ಬರಿಗೆ ಬೆಳಕಾಗುವ ಗುರಿ ಯಲ್ಲಿ ನಾವು ಸಾಗಬೇಕಿದೆ. ಮಹಿಳೆಯರು ಎಲ್ಲಾ ರಂಗದಲ್ಲಿ ನೆಲೆಯೂರಿ ಮಾತೃಶೀ ಹೇಮಾವತಿ ವೀ. ಹೆಗ್ಗಡೆ ಅಮ್ಮನವರ ಕನಸನ್ನು
ಇಡೇರಿಸಬೇಕು ಎಂದು ತಿಳಿಸಿದರು.
ಮಹಿಳಾ ಕಲ್ಯಾಣ ಸಂಸ್ಥೆಯ ನಿರ್ದೇಶಕರಾದ ಸುರೇಖಾ ಪಾಟೀಲ ಮಾತನಾಡಿ, ಮಕ್ಕಳ ನೈತಿಕ ಶಿಕ್ಷಣದಲ್ಲಿ ತಂದೆ ತಾಯಿಗಳ ಪಾತ್ರ ಎಂಬ ವಿಷಯದ ಬಗ್ಗೆ ವಿಚಾರಗಳನ್ನು ಮಂಡಿಸಿ, ಮಕ್ಕಳ ಪಾಲನೆ ಪೋಷಣೆ, ಉತ್ತಮ ಸಂಸ್ಕಾರ ನೀಡುವಲ್ಲಿ ತಂದೆ ತಾಯಿಗಳ ಪಾತ್ರ ಬಹಳ ಮುಖ್ಯವಾಗಿದೆ.
ಮಕ್ಕಳನ್ನು ದುಶ್ಚಟಕ್ಕೆ ದಾಸರಾಗದಂತೆ ನೋಡಿಕೊಳ್ಳುವುದು ಮುಖ್ಯ. ಮಕ್ಕಳು ವಯಸ್ಸಿಗೆ ಬಂದಾಗ ಉತ್ತಮ ದಾರಿ ತೋರಿಸಬೇಕು ಎಂದರು.
ಗೀತಾ ಶೇಕಪ್ಪ ಕಡಗದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಅತಿಥಿಗಳಾಗಿ ಜಿ ಆರ್ ಸೋನಿರ್ ವಕೀಲರು, ಜಿಲ್ಲಾ ನಿರ್ದೇಶಕ ಸತೀಶ ನಾಯ್ಕ, ಜ್ಞಾನ ವಿಕಾಸ ಪ್ರಾದೇಶಿಕ ಯೋಜನಾಧಿಕಾರಿ ಮಲ್ಲಿಕಾ, ಯೋಜನಾಧಿಕಾರಿಗಳು ನಾಗರಾಜ್ ಹದ್ಲಿ ,ಒಕ್ಕೂಟದ ಪದಾಧಿಕಾರಿಗಳು, ಕೇಂದ್ರದ 1000 ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು. ಕೇಂದ್ರದ ಸಂಯೋಜಕೀಯರು ಹಾಗೂ ಮೇಲ್ವಿಚಾರಕರಾದ ಸಂಗೀತಾ ಪೂಜಾರ, ಪ್ರಭಾವತಿ ಯಾವಗಲ್ , ನಾಗಪ್ಪ ಗೌಡ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಲಲಿತಾ ಮುಕ್ರಿ, ಉಪಸ್ತಿತರಿದರು. ಮೇಲ್ವಿಚಾರಕರಾದ ವೈಶಾಲಿ ನಿರೂಪಿಸಿ, ವಂದಿಸಿದರು.