ಬೆಳಗಾವಿ. ರಾಯಬಾಗ
🖊️kareppa s kamble
ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಪೌರಡಳಿತ ಇಲಾಖೆಯ ಎಸ್ ಎಪ್ ಸಿ ವಿಶೇಷ ಅನುದಾನದಡಿಲ್ಲಿ 2.75 ಕೋಟಿ ರೂ ಗಳ ಅನುದಾನದಲ್ಲಿ ಕುಡಚಿ ಪುರಸಭೆ ಕಾರ್ಯಾಲಯದ ನೂತನ ಕಟ್ಟಡ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕುಡಚಿ ಬಸ್ ನಿಲ್ದಾಣದ ನೂತನ ಕಟ್ಟಡವನ್ನು ಶಾಸಕ ಪಿ ರಾಜೀವ ಹಾಗೂ ಪುರಸಭೆ ಅಧ್ಯಕ್ಷ ದತ್ತಾ ಸಣ್ಣಕ್ಕಿ ರಿಬ್ಬನ್ ಕತ್ತರಿಸುವ ಮುಖಾಂತರ ಲೋಕಾರ್ಪಣೆ ಗೊಳಿಸಿದರು.
ಶಾಸಕ ಪಿ ರಾಜೀವ್ ಮಾತನಾಡಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಮತ್ತು ಪ್ರಯಾಣಿಕರು ಕಸ ಎಸೆಯದೆ ಹಾಗೂ ಪಾನ್. ಗೂಟಕಾ ತಿಂದು ಉಗಳದೆ ದೇಶದ ಪ್ರಧಾನಿ ನರೇಂದ್ರ ಮೋದಿಜಿ ಅವರ ಸ್ವಚ್ಛ ಭಾರತ ಅಭಿಯಾನದ ಕನಸು ನನಸು ಮಾಡುವ ನಿಟ್ಟಿನಲ್ಲಿ ಸ್ವಚ್ಛವಾಗಿ ಇಟ್ಟುಕೊಂಡು ರಾಜ್ಯದಲ್ಲಿ ಒಂದು ಮಾದರಿ ಬಸ್ ನಿಲ್ದಾಣವನ್ನಾಗಿ ಮಾಡಬೇಕೆಂದು ಹೇಳಿದರು
ನಂತರ ಜೂನ್ನೆದಿಯಾ ನಗರದ 380 ನಿರಾಶ್ರಿತ ಕುಟುಂಬಗಳಿಗೆ ಶಾಸಕರು ಪಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ನೀಡಿದರು
ನಂತರ ಕುಡಚಿ ಶಾಸಕರು ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ, ಸರ್ವ ಸದಸ್ಯರು ಹಾಗೂ ಪೌರಕಾರ್ಮಿಕರಿಗೆ ಶಾಸಕ ಪಿ ರಾಜೀವ್ ಸತ್ಕರಿಸಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಕುಡಚಿ ಪುರಸಭೆ ಉಪಾಧ್ಯಕ್ಷ ಹಮಿದೂದ್ದಿನ ರೋಹಿಲೆ, ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಿಕ, ಸದಸ್ಯರಾದ ಮೋಹನ ಲೋಹಾರ, ಮೋಶಿನ ಮಾರುಫ, ಇಮಾಮುದ್ದಿನ ಸಜ್ಜನ, ಶಿವಪ್ಪಾ ಗಸ್ತಿ, ಸಂಜೀವ ರಡರಟ್ಟಿ ಅನಿಲ್ ಪಾಟೀಲ್ ಸುನೀಲಗೌಡ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.