ಹಳ್ಳೂರ.
ಮೂಡಲಗಿ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಕೆಲಸ ಸ್ಥಗಿತಗೊಳಿಸಿ ಆರಂಭಿಸಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಗುರುವಾರದಂದು ಮೂಡಲಗಿ ತಹಶೀಲ್ದಾರರಾದ ಶ್ರೀ ಶಿವಾನಂದ ಬಬಲಿ ಅವರು ಮುಷ್ಕರ ಸ್ಥಳಕ್ಕೆ ಆಗಮಿಸಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಬೆಂಬಲ ನೀಡುವುದರೊಂದಿಗೆ ಮನವಿಯನ್ನು ಸ್ವೀಕರಿಸಿದರು.
ಮೂಡಲಗಿ ತಾಲೂಕಿನ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ ಆರಂಭಿಸಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮೂಡಲಗಿ ತಾಲೂಕಿನ ಅಧ್ಯಕ್ಷರಾದ ಶ್ರೀ ಆನಂದ ಹಂಜ್ಯಾಗೋಳ.ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕಲ್ಲಪ್ಪ ಅಜ್ಜಪ್ಪನವರ.ಹಾಗೂ ಕಂದಾಯ ಇಲಾಖೆಯ ನೌಕರರ ಸಂಘದ ಅಧ್ಯಕ್ಷರು ಶ್ರೀ ಪರಸಪ್ಪ ನಾಯಕ. ಕಂದಾಯ ನಿರೀಕ್ಷಕರಾದ ಸಂಗನ ಹೊಸಮನಿ.ಮುಷ್ಕರದ ಸ್ಥಳಕ್ಕೆ ಬಂದು ಸಂಪೂರ್ಣ ಬೆಂಬಲ ನೀಡಿ ಮನವಿ ಸ್ವೀಕರಿಸಿದರು.
ಗ್ರಾಮ ಆಡಳಿತ ಅಧಿಕಾರಿ ಸಂಘದ ಅಧ್ಯಕ್ಷರಾದ ಮಾರುತಿ ಶಿಗಿಹೋಳಿ. ಉಪಾಧ್ಯಕ್ಷೆ ಭಾರತಿ ಕಾಳೆ. ಗ್ರಾಮ ಆಡಳಿತ ಅಧಿಕಾರಿಗಳಾದ ಎಫ್ ಎಚ್ ಪತ್ತೆಖಾನ. ಎ ಎಸ್ ಬಾಗವಾನ. ಎಂ ಎಚ್ ಹೋಲ್ಕರ. ಸಂಜು ಅಗ್ನೇಪ್ಪಗೊಳ. ಕೇದಾರಲಿಂಗ ಬಾಸಗಿ. ಗೋಪಾಲ ಮುತ್ತೆಪ್ಪಗೊಳ. ಎಂ ಎ ಮುಲ್ಲಾ. ಹನಮಂತ ಮೆಳ್ಳಿಕೇರಿ. ಅಮಿನ ಲಾಡಖಾನ್. ಸುರೇಶ ತುಪ್ಪದ. ಸುರೇಖಾ ಇರಕರ. ಕರಿಷ್ಮಾ ನದಾಫ.ಸೇರಿದಂತೆ ಅನೇಕರಿದ್ದರು.