ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಎನ್.ವೇಣುಗೋಪಾಲ ಅವರು ಕೋಹಳ್ಳಿಯಲ್ಲಿ ಮತಗಟ್ಟೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ಕೋಹಳ್ಳಿ:ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಎನ್ .ವೇಣುಗೋಪಾಲ ಅವರು ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಹಾಗೂ ಚೆಕ್ ಪೋಸ್ಟ್‌ಗಳಿಗೆ ಮಂಗಳವಾರ ಭೇಟಿ ನೀಡಿದರು.
ಕೋಹಳ್ಳಿ, ಯಲಿಹಡಲಗಿ, ಕಕಮರಿ, ರಾಮತೀರ್ಥ, ಕೊಟ್ಟಲಗಿ ಚೆಕ್ ಪೋಸ್ಟ್ ಹಾಗೂ ಮತಗಟ್ಟೆಗಳಲ್ಲಿನ ವಿದ್ಯುತ್ ಸೌಲಭ್ಯ, ರ್ಯಾಂಪ್, ಕಿಡಕಿ, ಬಾಗಿಲು, ಕುಡಿವ ನೀರು, ಶೌಚಾಲಯಗಳ ವ್ಯವಸ್ಥೆಗಳನ್ನು ಅವರು ಪರಿಶೀಲಿಸಿದರು.
ಪ್ರಾಥಮಿಕ ಶಾಲೆಗಳಲ್ಲಿರುವ ಎರಡು ರ್ಯಾಂಪ್ ಗಳಿಗೆ ಮತದಾರರಿಗೆ ಅನುಕೂಲವಾಗುವಂತೆ ಇಕ್ಕೆಲಗಳಲ್ಲಿ ಕಬ್ಬಿಣದ ರಾಡ್ ಹಾಕಲು ಸಲಹೆ ನೀಡಿದ ಅವರು, ರಾಜಕೀಯ ಪಕ್ಷ
ನಾಯಕರನ್ನು ಒಳಗೊಂಡ ಬ್ಯಾನರ್, ಹೋರ್ಡಿಂಗ್ಸ್ ತೆರವುಗೊಳಿಸಿರುವ ಬಗ್ಗೆ ಮಾಹಿತಿ ಪಡೆದರು. ಮಹಾರಾಷ್ಟ್ರ ಗಡಿಯಲ್ಲಿ ಅವಶ್ಯವಿರುವ ಸ್ಥಳಗಳಲ್ಲಿ ಒಂದು ವಾರ ಹೆಚ್ಚಿನ ಚೆಕ್ ಪೋಸ್ಟ್ ಸ್ಥಾಪಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಐಗಳಿ ಪೋಲಿಸ್ ಠಾಣೆ ಪಿಎಸ್‌ಐ ಶಿವಾಜಿ ಪವಾರ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.






