ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುತ್ತದೆ. ಈ ಹಿನ್ನೆಲೆ ಕರ್ನಾಟಕಕ್ಕೆ ಸಂಬಂಧಿಸಿದ 14 ಪ್ರಮುಖ ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗುತ್ತಿದೆ.
ಈ ಬಗ್ಗೆ ನೈರುತ್ಯ ರೈಲ್ವೆ ಮಾಹಿತಿ ನೀಡಿದ್ದು, ” ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು 14 ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ತಾತ್ಕಾಲಿಕವಾಗಿ ಜೋಡಿಸಲು ನಿರ್ಧರಿಸಲಾಗಿದೆ” ಎಂದು ತಿಳಿಸಿದೆ.
ಅಕ್ಟೋಬರ್ 25 ರಿಂದ ನವೆಂಬರ್ 24 ರವರೆಗೆ ರೈಲು ಸಂಖ್ಯೆ 16589 ಕೆಎಸ್ಆರ್ ಬೆಂಗಳೂರು-ಸಾಂಗ್ಲಿ ರಾಣಿ ಚೆನ್ನಮ್ಮ ಡೈಲಿ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್ ಎಕಾನಮಿ ಬೋಗಿ ಜೋಡಿಸಲಾಗುತ್ತಿದೆ.
* ಅಕ್ಟೋಬರ್ 26 ರಿಂದ ನವೆಂಬರ್ 25 ರವರೆಗೆ ರೈಲು ಸಂಖ್ಯೆ 16590 ಸಾಂಗ್ಲಿ-ಕೆಎಸ್ಆರ್ ಬೆಂಗಳೂರು ರಾಣಿ ಚೆನ್ನಮ್ಮ ಡೈಲಿ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್ ಎಕಾನಮಿ ಬೋಗಿ ಜೋಡಿಸಲಾಗುತ್ತಿದೆ.
* ಅಕ್ಟೋಬರ್ 25 ರಿಂದ ನವೆಂಬರ್ 24, ರವರೆಗೆ ರೈಲು ಸಂಖ್ಯೆ 20653 ಕೆಎಸ್ಆರ್ ಬೆಂಗಳೂರು-ಬೆಳಗಾವಿ ಡೈಲಿ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್ ಎಕಾನಮಿ ಬೋಗಿ ಜೋಡಿಸಲಾಗುತ್ತಿದೆ.
* ಅಕ್ಟೋಬರ್ 26 ರಿಂದ ನವೆಂಬರ್ 25, ರವರೆಗೆ ರೈಲು ಸಂಖ್ಯೆ 20654 ಬೆಳಗಾವಿ-ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್ ಎಕಾನಮಿ ಬೋಗಿ ಜೋಡಿಸಲಾಗುತ್ತಿದೆ.
* ಅಕ್ಟೋಬರ್ 25 ರಿಂದ ನವೆಂಬರ್ 25, ರವರೆಗೆ ರೈಲು ಸಂಖ್ಯೆ 12649 ಯಶವಂತಪುರ-ಹಜರತ್ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್ ಎಕಾನಮಿ ಬೋಗಿ ಜೋಡಿಸಲಾಗುತ್ತಿದೆ.
* ಅಕ್ಟೋಬರ್ 27 ರಿಂದ ನವೆಂಬರ್ 28 ರವರೆಗೆ ರೈಲು ಸಂಖ್ಯೆ 12650 ಹಜರತ್ ನಿಜಾಮುದ್ದೀನ್-ಯಶವಂತಪುರ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್ ಎಕಾನಮಿ ಬೋಗಿ ಜೋಡಿಸಲಾಗುತ್ತಿದೆ.
* ಅಕ್ಟೋಬರ್ 24 ರಿಂದ ನವೆಂಬರ್ 26, ರವರೆಗೆ ರೈಲು ಸಂಖ್ಯೆ 12629 ಯಶವಂತಪುರ-ಹಜರತ್ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್ ಎಕಾನಮಿ ಬೋಗಿ ಜೋಡಿಸಲಾಗುತ್ತಿದೆ.
* ಅಕ್ಟೋಬರ್ 30 ರಿಂದ ನವೆಂಬರ್ 29, ರವರೆಗೆ ರೈಲು ಸಂಖ್ಯೆ 12630 ಹಜರತ್ ನಿಜಾಮುದ್ದೀನ್-ಯಶವಂತಪುರ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್ ಎಕಾನಮಿ ಬೋಗಿ ಜೋಡಿಸಲಾಗುತ್ತಿದೆ.
* ಅಕ್ಟೋಬರ್ 25 ರಿಂದ ನವೆಂಬರ್ 22, ರವರೆಗೆ ರೈಲು ಸಂಖ್ಯೆ 17323 ಎಸ್ಎಸ್ಎಸ್ ಹುಬ್ಬಳ್ಳಿ-ಬನಾರಸ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್ ಬೋಗಿ ಜೋಡಿಸಲಾಗುತ್ತಿದೆ.
* ಅಕ್ಟೋಬರ್ 27 ರಿಂದ ನವೆಂಬರ್ 24, ರವರೆಗೆ ರೈಲು ಸಂಖ್ಯೆ 17324 ಬನಾರಸ್-ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್ ಬೋಗಿ ಜೋಡಿಸಲಾಗುತ್ತಿದೆ.
* ಅಕ್ಟೋಬರ್ 26 ರಿಂದ ನವೆಂಬರ್ 23, ರವರೆಗೆ ರೈಲು ಸಂಖ್ಯೆ 22685 ಯಶವಂತಪುರ-ಚಂಡೀಗಢ ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಸ್ಲೀಪರ್ ಕ್ಲಾಸ್ ಬೋಗಿ ಜೋಡಿಸಲಾಗುತ್ತಿದೆ.
* ಅಕ್ಟೋಬರ್ 29 ರಿಂದ ನವೆಂಬರ್ 26, ರವರೆಗೆ ರೈಲು ಸಂಖ್ಯೆ 22686 ಚಂಡೀಗಢ-ಯಶವಂತಪುರ ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಸ್ಲೀಪರ್ ಕ್ಲಾಸ್ ಬೋಗಿ ಜೋಡಿಸಲಾಗುತ್ತಿದೆ.
* ಅಕ್ಟೋಬರ್ 31 ರಿಂದ ನವೆಂಬರ್ 28, ರವರೆಗೆ ರೈಲು ಸಂಖ್ಯೆ 16541 ಯಶವಂತಪುರ-ಪಂಢರಪುರ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಸ್ಲೀಪರ್ ಕ್ಲಾಸ್ ಬೋಗಿ ಜೋಡಿಸಲಾಗುತ್ತಿದೆ.
* ನವೆಂಬರ್ 1 ರಿಂದ 29, ರವರೆಗೆ ರೈಲು ಸಂಖ್ಯೆ 16542 ಪಂಢರಪುರ-ಯಶವಂತಪುರ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಸ್ಲೀಪರ್ ಕ್ಲಾಸ್ ಬೋಗಿ ಜೋಡಿಸಲಾಗುತ್ತಿದೆ.