ಬೆಳಗಾವಿ
ವರದಿ :ಸುನೀಲ್ ಕಬ್ಬುರ್
ಅಲಖನೂರ : ಗ್ರಾಮದ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಶ್ರೀಮತಿ ಸುನಿತಾ ಸದಾನಂದ ಪಾಮದಿನ್ನಿ ಕನ್ನಡ ಮಾಧ್ಯಮ ಪೂರ್ವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2022-23 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು.
ಈ ಕಾರ್ಯಕ್ರಮವನ್ನು ಕವಲಗುಡ್ಡದ ಪರಮ ಪೂಜ್ಯ ಶ್ರೀ ಸಿದ್ಧಯೋಗಿ ಅಮರೇಶ್ವರ ಮಹಾರಾಜರು,ಹನಗಂಡಿಯ ಅವಧೂತಾಶ್ರಮದ ಪೂಜ್ಯ ಶ್ರೀ ಚಿದಾನಂದವಧೂತರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು.
2021-22 ನೇ ಸಾಲಿನ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.90%ಕ್ಕಿಂತ ಅಧಿಕ ಅಂಕಗಳಿಸಿದ ಅಲಖನೂರ
ಗ್ರಾಮದ ವಿದ್ಯಾರ್ಥಿಗಳಿಗೆ ಸಮ್ಮಾನಿಸಲಾಯಿತು. ಶ್ರೀ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕೆ.ಎಸ್ ಪಾಮದಿನ್ನಿ ಅವರಿಗೆ ವೇದಿಕೆ ಮೇಲಿದ್ದ ಗಣ್ಯರಿಂದ ಸತ್ಕಾರ ನಡೆಯಿತು. ನಂತರ ಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ದಿವ್ಯ ಸಾನಿಧ್ಯವಹಿಸಿದ್ದ ಕವಲಗುಡ್ಡದ ಪರಮ ಪೂಜ್ಯ ಶ್ರೀ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಮಾತನಾಡಿ, ಆಸ್ತಿ, ಅಂತಸ್ತು ಮಾಡಿದರೆ ಬದುಕಿಗೆ ಸುಂದರತೆ ಬರುವುದಿಲ್ಲ ಆಸ್ತಿ, ಅಂತಸ್ತು ಗಳಿಸೋಕೆ ಬೇಕಾದ ಜ್ಞಾನವನ್ನು ಗಳಿಸಿದರೆ ಬದುಕಿಗೆ ಸುಂದರತೆ ಬರುತ್ತದೆ ಎಂದು ಅಭಿಮತ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಪೂಜ್ಯ ಶ್ರೀ ಚಿದಾನಂದವಧೂತರು, ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಉದಾತ್ತ ನೈತಿಕತೆಯ ಬಲವನ್ನು ತುಂಬುವ ಕಾರ್ಯವನ್ನು ಶಿಕ್ಷಕರು ಮಾಡಬೇಕು. ಮಕ್ಕಳ ಸರ್ವತೋಮುಖ ವಿಕಾಸದಲ್ಲಿ ಶಿಕ್ಷಕರು ಹಾಗೂ ಮನೆಯ ಪಾಲಕರ ಪಾತ್ರ ಮಹತ್ವವಾಗಿದೆ ಎಂದರು.ಚಿಕ್ಕೋಡಿಯ ಖ್ಯಾತ ನ್ಯಾಯವಾದಿಗಳಾದ ಸಾಗರ ಪಾಮದಿನ್ನಿ , ಕುಡಚಿ ಕಾಂಗ್ರೆಸ್ ಪಕ್ಷದ ಯುವ ಧುರಿಣ ಮಹೇಂದ್ರ ತಮ್ಮಣ್ಣವರ, ಮಾಜಿ ತಾಲೂಕಾ ಪಂಚಾಯತ ಸದಸ್ಯ ಶಂಕರ ಪೂಜಾರಿ,ಅಲಖನೂರಿನ ಗೊಪಾಲ ಪೂಜೇರಿ ಮಾಜಿ ಸೈನಿಕರು, ಶಿಕ್ಷಕರಾದ ಅಜೀತ ಬಸ್ತವಾಡೆ,ಜ್ಯೋತೆಪ್ಪ ವಗ್ಗರ,ಸಚೀನ ಅಲಗೋಂಡ, ಶಿಲ್ಪಾ ಆಲದಕಟ್ಟಿ,ಜ್ಯೋತಿ ಕಾಂಬಳೆ,ಗಂಗಾ ಚೌಗಲಾ,ಶೈಲಾ ಪೂಜಾರಿ ಹಾಗೂ ಶಾಲೆಯ ಮುದ್ದು ಮಕ್ಕಳು,ಪಾಲಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.