ಬೆಳಗಾವಿ ಬೆಂಗಳೂರು ವಂದೇ ಭಾರತ ರೈಲು ಶೀಘ್ರ ಸಂಚಾರ ಪ್ರಾರಂಭಿಸುವ ಕುರಿತು ಮತ್ತು ಬೆಳಗಾವಿ ಮಿರಜ್ ನಡುವೆ ಸಂಚರಿಸುತ್ತಿರುವ ವಿಶೇಷ ರೈಲನ್ನು ಪ್ಯಾಸೇಂಜರ್ ರೈಲಾಗಿ ಪರಿವರ್ತಿಸುವ ಕುರಿತು ಹಾಗೂ ಘಟಪ್ರಭಾ ರೈಲು ನಿಲ್ದಾಣದ ನವೀಕರಣ ಕಾಮಗಾರಿ ಕಳೆಪೆ ಮತ್ತು ಆಮೆಗತಿಯಲ್ಲಿ ಸಾಗಿರುವ ಕುರಿತು ಇಂದು ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ, ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವರಾದ ಶ್ರೀ ಪ್ರಹ್ಲಾದ ಜೋಶಿ ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರೊಂದಿಗೆ ವಿಸ್ತೃತ ಚರ್ಚೆ ನಡೆಸಲಾಯಿತು.
ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಅವರ ಬೇಡಿಕೆಗಳಿಗೆ ಸ್ಪಂದಿಸಿದ ಸಚಿವರು ವಂದೇ ಭಾರತ ರೈಲಿಗೆ ಈಗಾಗಲೇ ಅನುಮತಿ ನೀಡಲಾಗಿದ್ದು, ಹೊಸ ರೈಲು ಬೋಗಿಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಅವುಗಳ ಲಭ್ಯತೆಯ ಆಧಾರದ ಮೇಲೆ ಆದಷ್ಟು ಬೇಗ ವಂದೇ ಭಾರತ ರೈಲು ಪ್ರಾರಂಭಿಸುವುದಾಗಿ ಭರವಸೆ ನೀಡಿದರು.
ಬೆಳಗಾವಿ ಮಿರಜ್ ವಿಶೇಷ ರೈಲನ್ನು ಕೇವಲ ಒಂದು ತಿಂಗಳಲ್ಲಿ ಪ್ಯಾಸೇಂಜರ್ ರೈಲಾಗಿ ಪರಿವರ್ತಿಸಿ ಆದೇಶಿಸುವುದಾಗಿ ಭರವಸೆ ನೀಡಿದರು.
ಘಟಪ್ರಭಾ ರೈಲು ನಿಲ್ದಾಣದ ಕಾಮಗಾರಿಗಳು ನಿಧಾನಗತಿಯ ಮತ್ತು ಕಳಪೆ ಮಟ್ಟದಾಗಿರುವ ಕುರಿತು ಶೀಘ್ರದಲ್ಲಿ ರೈಲ್ವೆ ಅಧಿಕಾರಿಗಳಿಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು ಎಂದು ಕಡಾಡಿಯವರ ಬೇಡಿಕೆಗಳಿಗೆ ಸಚಿವರು ಭರವಸೆ ನೀಡಿದ್ದಾರೆ.





