ಹರಿದ ಅಂಗಿ ಇದ್ದರೂ ಪರವಾಗಿಲ್ಲ,  ಕೈಯಲ್ಲಿ ಒಂದು ಪುಸ್ತಕವಿರಲಿ: ಬಿ.ಎಲ್ ಘಂಟಿ

Share the Post Now


ಅಲಖನೂರ: ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 7 ನೇ ತರಗತಿಯ ಬಿಳ್ಕೊಡುಗೆ ಸಮಾರಂಭ

ಮುಗಳಖೋಡ : ವಿದ್ಯಾರ್ಥಿಗಳ ಜೀವನ ಬಹಳ ಅಮೂಲ್ಯವಾದದ್ದು ಅದನ್ನು ಸರಿಯಾಗಿ ಸದುಪಯೋಗಪ ಡಿಸಿಕೊಂಡು ಗುರಿಏಡೆಗೆ  ಸಾಗಬೇಕು,ಎಷ್ಟೇ ಕಷ್ಟ ಬಂದರೂ ದೀಪಗಂಬದ ಕೆಳಗೆ ಕುಂತು ಅಭ್ಯಾಸ ಮಾಡಿ ಮಹಾನಾಯಕ ಡಾ. ಅಂಬೇಡ್ಕರರು ಆದರ್ಶರಾಗಬೇಕು ,ಹರಿದ ಅಂಗಿ ಇದ್ದರೂ ಪರವಾಗಿಲ್ಲ ಕೈಯಲ್ಲಿ ಒಂದು ಪುಸ್ತಕವಿರಲಿ ಎಂದು ಕರ್ನಾಟಕ ರಾಜ್ಯ ಸರಕಾರಿ  ನೌಕರ ಸಂಘದ ಗೌರವಾಧ್ಯಕ್ಷ ಹಾಗೂ ಶಿಕ್ಷಕ ಬಿ ಎಲ್ ಘಂಟಿ ಹೇಳಿದರು.

ಅವರು ಸಮಿಪದ ಅಲಖನೂರಿನ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆ.21 ಶುಕ್ರವಾರದಂದು ನಡೆದ 2024 – 25 ನೇ ಸಾಲಿನ  ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 7ನೇ ತರಗತಿಯ ಬಿಳ್ಕೊಡುಗೆ ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಮಾತನಾಡಿ, ವಿದ್ಯಾರ್ಥಿಗಳಿಗೆ ಪುಸ್ತಕಗಳು ಮಸ್ತಕದ ಆಹಾರವಾಗಬೇಕು ಬಸವಣ್ಣನವರ ಸಮಾನತೆ, ಸಂಗೊಳ್ಳಿ ರಾಯಣ್ಣನರ ಶೌರ್ಯವನ್ನು ಮೈಗೂಡಿಸಿಕೊಳ್ಳಬೇಕು. ಕಿತ್ತೂರು ರಾಣಿ ಚೆನ್ನಮ್ಮನ ಪರಾಕ್ರಮ ವಿದ್ಯಾರ್ಥಿನಿಯರ ಆದರ್ಶವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಬಳಿಕ ಮಾಜಿ ಸೈನಿಕ ಗೋಪಾಲ ಪೂಜಾರಿ ಮಾತನಾಡಿ, ಸರಕಾರದ ಎಲ್ಲಾ ಪರೀಕ್ಷೆಗಳನ್ನು ಎದುರಿಸಿ ನೇಮಕಗೊಂಡ ಉತ್ತಮ ಶಿಕ್ಷಕರು  ಇರುವ ಸರ್ಕಾರಿ  ಶಾಲೆಗಳನ್ನು ಉಳಿಸಿ ಬೆಳೆಸುವುದು ಅನಿವಾರ್ಯವಾಗಿದೆ, ವಿದ್ಯಾರ್ಥಿಗಳಿಗಾಗಿ ಇರುವ ಸರಕಾರಿ ಯೋಜನೆ ಹಾಗೂ ಸೌಲಭ್ಯಗಳನ್ನು ಬಳಿಸಿಕೋಳ್ಳಿ ಎಂದು ಹೇಳಿದರು.

ನಿಲಜಿ ಕ್ಲಸ್ಟರ್ ಸಿ ಆರ್ ಪಿ ಪರಗೊಂಡ ಕಾಂಬಳೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ನಂತರ ವಾರ್ಷಿಕ ಸ್ನೇಹ ಸಮ್ಮೇಳನದ ಪ್ರಯುಕ್ತ ನಡೆದ ವಾರ್ಷಿಕ ಕ್ರೀಡಾ ಕೂಟದಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ
ಹಾಗೂ ಆದರ್ಶ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳು ನೀಡಿದರು, ಬಳಿಕ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು

ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ  ಅಧ್ಯಕ್ಷರಾದ ಸಿದ್ರಾಮ  ಹಸರೆ ,ಕರೆಪ್ಪ ಶಿರಡೋಣಿ ,ಶಿವಪುತ್ರ ಕಾಂಬಳೆ, ಸಂಜು ಮಾಂಗ,ಬಸು ಮಾಂಗ, ಲಕಪ್ಪ ನಾಯಕ ಶಿಕ್ಷಕರಾದ ಎಮ್ ಎ ಗುಡೋಡಗಿ,  ಸಿ ಎಸ್ ಕುಂಚನೂರ. ಎಂ ಎಚ್ ಗೋಳಸಂಗಿ, ಶಿಕ್ಷಕಿ ಡಿ ಜಿ ಕರೆರುದ್ರಣ್ಣವರ, ಎ ಬಿ ಸುಗ್ಗಣ್ಣವರ,  ಎಂ ಎಸ್ ಕಾಂಬಳೆ ಹಾಗೂ ಪರಮಾನಂದವಾಡಿ ಸಿ ಆರ್‌ ಪಿ ಷಣ್ಮುಖ ನಾವಿ ಮತ್ತಿತರರು  ಉಪಸ್ಥಿತರಿದ್ದರು .
ಶಿಕ್ಷಕಿ ಎಸ್ ಎಂ   ದೇವಾನಗೋಳ ನಿರೂಪಿಸಿದರು ಮುಖ್ಯೋಪಾಧ್ಯಾಯ ಎ ಸಿ ಕಿರಣಗಿ ಸ್ವಾಗತಿಸಿದರು ,  ಟಿ ಕೆ ಲಬಾಗೆ ವಂದಿಸಿದರು .


ವರದಿ: ಸಂತೋಷ ಮುಗಳಿ

Leave a Comment

Your email address will not be published. Required fields are marked *

error: Content is protected !!