ಜ. 22 ರಿಂದ ಬೇಡರಹಟ್ಟಿ ಸದಾಶಿವ ಅಜ್ಜನವರ ಜಾತ್ರಾ ಮಹೋತ್ಸವ ಪ್ರಾರಂಭ

Share the Post Now

ಬೆಳಗಾವಿ

ವರದಿ: ಶಶಿಕಾಂತ ಪುಂಡಿಪಲ್ಲೆ


ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬೇಡರಹಟ್ಟಿ ಗ್ರಾಮದ ಆರಾಧ್ಯ ದೈವರಾದ ಶ್ರೀ ಸದಾಶಿವ ಅಜ್ಜನವರ ಜಾತ್ರಾ ಮಹೋತ್ಸವವು ಜರಗುಲಿದ್ದು ದಿನಾಂಕ 22ರಂದು ರಥೋತ್ಸವ ಜರುಗಲಿದ್ದು.

ದಿನಾಂಕ 23 ರಂದು ಸೈಕಲ್ ಸ್ಪರ್ಧೆ ಹಾಗೂ ಓಟದ ಸ್ಪರ್ಧೆ ಜರುಗಿದ ಬಳಿಕ ಪಂಕ್ತಿ ಹಾಗೂ ಶ್ರೀಗಳಿಂದ ಧರ್ಮದ ಪಾರಮಾರ್ಥ ನುಡಿಗಳು ನಡೆಯಲಿವೆ ಕೊನೆಯ ದಿನ ದಿನಾಂಕ 24ರಂದು 55 ಕೆ ಜಿ ಪುರಷರ ಕಬ್ಬಡಿ ಪಂದ್ಯಾವಳಿ ಹಾಗೂ ಜಂಗೀ ನಿಕಾಲಿ ಕುಸ್ತಿಗಳು ನಡೆಯಲಿವೆ.

ಇನ್ನು ಅದೇ ರಾತ್ರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ಹಾಗೂ ಕರ್ನಾಟಕ ರಾಜ್ಯ ಕಲಾವಿದರ ರಕ್ಷಣಾ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ “ಹಾಡೋಣ ಬಾ ಹಾಡಿ ಕುಣಿಯೋಣ ಬಾ” ಎಂಬ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಸಮಸ್ತ ಭಕ್ತಾದಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗುವಂತೆ ಜಾತ್ರಾ ಕಮೀಟಿ ಅವರು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಠದ ಸ್ವಾಮೀಜಿಗಳಾದ ಹಾಲಯ್ಯ ಬಬಲಾದಿಮಠ,ಚೆನ್ನಮಲ್ಲಯ್ಯ ಬಬಲಾದಿಮಠ, ಜಾತ್ರಾ ಕಮೀಟಿಯ ಸದಸ್ಯರಾದ ಸುರೇಶ ಸಮಗೋಂಡ,ಪರಸಪ್ಪ ಯಳ್ಳೂರು,ಗೌಡಪ್ಪ ಸತ್ತಿ,ಕಲಪ್ಪ ಆಲಕನೂರ,ಶ್ರೀಶೈಲ ಸಮಗೊಂಡ,ಮಲ್ಲಪ್ಪ ಸತ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು .

Leave a Comment

Your email address will not be published. Required fields are marked *

error: Content is protected !!