ಜ. 3ರಂದು ಹಾರೂಗೇರಿಯಲ್ಲಿ ವೀರರಾಣಿ ಕಿತ್ತೂರಾಣಿ ನಾಟಕ ಪ್ರದರ್ಶನ

Share the Post Now

ಬೆಳಗಾವಿ:

ರಾಯಭಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಹಾರೂಗೇರಿ ಪಟ್ಟಣದ ಎಚ್ ವಿ ಎಚ್ ಮೈದಾನದಲ್ಲಿ ಜನವರಿ 3ರಂದು ಸಂಜೆ 6:30ಕ್ಕೆ ಧಾರವಾಡದ ರಂಗಾಯಣ ಕಲಾವಿದರಿಂದ ಹಾಗೂ ಕರ್ನಾಟಕ ಸರ್ಕಾರ ಕನ್ನಡ ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಆಯೋಜನೆಗೊಂಡಿರುವ ರಂಗಭೂಮಿ ನಾಟಕ ವೀರರಾಣಿ ಕಿತ್ತೂರು ಚೆನ್ನಮ್ಮ ಆ ಪ್ರದರ್ಶನ ಹಾರೂಗೇರಿಯಲ್ಲಿ HVH ಮೈದಾನದಲ್ಲಿ ನಡೆಯಲಿದೆ ಈ ಒಂದು ರಂಗಪ್ರವೇಶದಲ್ಲಿ ಅಲ್ಲಿ ಸುಮಾರು ರಂಗಾಯಣದ 250 ಜನ ಕಲಾವಿದರು ಭಾಗವಹಿಸುವರು ವೇದಿಕೆಯ ಮೇಲೆ ಆನೆ ಕುದುರೆ ಒಂಟೆ ಇವುಗಳ ಎಲ್ಲಾ ದೃಶ್ಯದ ಪ್ರಯೋಗಗಳು ಇರುತ್ತವೆ 30 ಅಡಿಯ ಕೋಟೆಯನ್ನು ನಿರ್ಮಿಸಲಾಗಿದೆ ಈ ಒಂದು ರಂಗ ಪ್ರಯೋಗವನ್ನು 25000 ಜನ ಏಕಕಾಲದಲ್ಲಿ ವೀಕ್ಷಣೆ ಮಾಡುವಂತಹ ಒಂದು ಅವಕಾಶ ಮಾಡಿಕೊಡಲಾಗಿದೆ

ಹಾಗೂ ನೇರ ಪ್ರಸಾರವನ್ನು ಬೃಹತ್ ಆದ ಎಲ್ಇಡಿ ವ್ಯವಸ್ಥೆಯನ್ನು ಮಾಡಿಲಾಗಿದ್ದು ಸುಮಾರು 40 ಸಾವಿರಕ್ಕಿಂತ ಹೆಚ್ಚು ಜನ ಇದ್ರು ಕೂಡ ಅತಿ ಹತ್ತಿರದಿಂದ ವೇದಿಕೆ ರಂಗ ಪ್ರಯೋಗವನ್ನು ನೋಡುವಂತ ವೇದಿಕೆಯನ್ನು ಕಲ್ಪಿಸಲಾಗಿದೆ ಹಾಗಾಗಿ ರಂಗಾಯಣದ ಈ ಬಹು ದೊಡ್ಡ ಸಾಧನೆಯ ಪ್ರಯೋಗಕ್ಕೆ ತಾವೆಲ್ಲರೂ ಆಗಮಿಸಬೇಕು ಈ ನಾಟಕವನ್ನು ವೀಕ್ಷಣೆ ಮಾಡಬೇಕು ಈಗಾಗಲೇ 15,000 ಪಾಸುಗಳನ್ನು ವಿತರಿಸಲಾಗಿದೆ ಪಾಸುಗಳ ಜೊತೆಗೆ ಎರಡು ಅಥವಾ ಮೂರು ಜನ ಕುಟುಂಬದ ಸದಸ್ಯರನ್ನ ಕರ್ಕೊಂಡುಬರಲಿಕ್ಕೆ ಅವಕಾಶ ಇದೆ ಎಲ್ಲರು ಬಂದು ನಾಟಕ ವೀಕ್ಷಣೆ ಮಾಡಬೇಕೆಂದು ಕುಡಚಿ ಶಾಸಕ ಪಿ ರಾಜೀವ್ ತಿಳಿಸಿದ್ದಾರೆ

ಪಾಸ್ ವಿತರಿಸತ್ತಿರುವ ಪಿ ರಾಜೀವ್

Leave a Comment

Your email address will not be published. Required fields are marked *

error: Content is protected !!