ಹಳ್ಳೂರ :ಸಮೀಪದ ಸೈದಾಪೂರ-ಸಮೀರವಾಡಿ ಗ್ರಾಮದ ಆರಾಧ್ಯ ದೇವರಾದ ಜಗದ್ಗುರು ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಬಾಗಿಯಾಗಿ ಶ್ರೀ ಶಿವಲಿಂಗೇಶ್ವರ ದೇವರ ದರ್ಶನ, ಆಶೀರ್ವಾದ ಪಡೆದುಕೊಂಡು ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ಆ ದೇವರು ಮಳೆ ಬೆಳೆ ಚನ್ನಾಗಿ ಆಗಿ ಎಲ್ಲರೂ ಸುಖವಾಗಿ ಇರಲೆಂದು ದೇವರಲ್ಲಿ ಬೇಡಿಕೊಂಡು ಶುಭ ಹಾರೈಸಿದರು.
ರಥೋತ್ಸವವು ಸಹಸ್ರಾರು ಭಕ್ತ ಸಮೂಹದಲ್ಲಿ ಬಹಳ ಅದ್ದೂರಿಯಾಗಿ ಜರುಗಿತು. ಕರಡಿ ಮೇಳ,ಕಾಂಡ್ಯಾಳ ಬಾಂಸಿಂಗ, ನಂದಿಕೋಲ, ವಿವಿಧ ವಾದ್ಯಮೇಳದೊಂದಿಗೆ ವಿಜೃಂಭಣೆಯಿಂದ ರಥೋತ್ಸವ ಜರುಗಿತು. ಭಕ್ತರು ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ತೇರಿನ ಮೇಲೆ ಬೆಂಡು ಬೆತ್ತಾಸು ಕಾರಿಕ ಹಾರಿಸಿ ಹರಕೆ ತೀರಿಸಿದರು .
ಈ ಸಮಯದಲ್ಲಿ ಹರಿಯಾಣದ ಕುರುಕ್ಷೇತ್ರ ಮತಕ್ಷೇತ್ರದ ಲೋಕಸಭಾ ಸದಸ್ಯರಾದ ನಾಯಬಸಿಂಗ ಸೈನಿ.ಅರ್ಚಕರಾದ ಮಹಾಂತೇಶ ಮಠಪತಿ. ಮಹಾಲಿಂಗ ಸನದಿ. ವಿವೇಕ ಮಾಲಕಾಪುರ. ಸೇರಿದಂತೆ ಭಕ್ತರಿದ್ದರು.
ನಂತರ ರಾತ್ರಿ ನಡೆದ ನಾಟಕ ಉದ್ಘಾಟನಾ ಸಮಾರಂಭದಲ್ಲಿ ಮಹಾಲಿಂಗ ಸನದಿ ಮಾತನಾಡಿ ನಾಟಕ ಒಂದು ರೈತ ಕುಟುಂಬಕ್ಕೆ ಒಳ್ಳೆಯ ಸಂದೇಶ ನೀಡುವಂತಹದ್ದು. ಕಲಾಭಿಮಾನಿಗಳಿಗೆ ಸಹಾಯ ಸಹಕಾರ ನೀಡಿ ಪ್ರೋತ್ಸಾಹ ನೀಡಿದರೆ ಮತ್ತಷ್ಟು ಉತ್ತೇಜನ ನೀಡಿದಂತಾಗುತ್ತದೆ ಎಂದರು. ರಂಗನಗೌಡಾ ಪಾಟೀಲ ಮಾತನಾಡಿ ಜಾತ್ರೆ ಧಾರ್ಮಿಕ ಕಾರ್ಯಕ್ರಮ ನಡೆಯುವುದರಿಂದ ಶಾಂತಿ ದೊರೆತು ಸೌಹಾರ್ದತೆ ಬೆಳೆಯುತ್ತದೆ ಎಂದು ಹೇಳಿದರು.
ಈ ಸಮಯದಲ್ಲಿ ಅರ್ಚಕರಾದ ಮಹಾಂತೇಶ ಮಠಪತಿ. ದೇವಸ್ಥಾನ ಅಧ್ಯಕ್ಷ ಮುರಿಗೆಪ್ಪ ಗುಣದಾಳ. ಶಿವಲಿಂಗಪ್ಪ ಕೌಜಲಗಿ. ಮಲ್ಲಗೌಡ ಪಾಟೀಲ. ಆನಂದ ಬನಹಟ್ಟಿ.ಸಮಾಜ ಸೇವಕ ಮುರಿಗೆಪ್ಪ ಮಾಲಗಾರ. ಮಹಾಲಿಂಗ ಮೂಗಳಖೋಡ. ಬಸವಣ್ಣೆಪ್ಪ ಬ್ಯಾಳಿ.ಮಲ್ಲಪ್ಪ ಪಾಶ್ಚಾಪೂರ.ರಾಮನಗೌಡ ಪಾಟೀಲ. ಮುತ್ತನಾಯ್ಕ ನಾಯ್ಕ. ಚನ್ನಪ್ಪ ಪಟ್ಟಣಶೆಟ್ಟಿ. ಬಸಲಿಂಗ ಹಮ್ಮಿದಡ್ಡಿ ಸೇರಿದಂತೆ ಅನೇಕರಿದ್ದರು. ಸರ್ವರಿಗೂ ಮಹಾಪ್ರಸಾದ ವ್ಯವಸ್ಥೆ ನಡೆಯಿತು.