ಜಲಜೀವನ್ ಮಷೀನ್ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಮಹೇಂದ್ರ ತಮ್ಮಣ್ಣವರ;
ಸಂತೋಷ ಮುಗಳಿ
ಮುಗಳಖೋಡ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಜಲಜೀವನ್ ಮಷೀನ್ ಕಾಮಗಾರಿಗೆ ಕುಡಚಿ ಮತಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ ಅವರು ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಸಮೀಪದ ಪಾಲಬಾವಿ ಗ್ರಾಮದ ಶ್ರೀ ಬರವಲಿಂಗೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಬುಧವಾರ ಮಧ್ಯಾಹ್ನ 2ಗಂಟೆಗೆ 2.80ಕೋಟಿ ವೆಚ್ಚದಲ್ಲಿ ಶಾಸಕ ಮಹೇಂದ್ರ ತಮ್ಮಣ್ಣವರ ಗುದ್ದಲಿ ಪೂಜೆ ನೆರವೇರಿಸಿದರು.
ಬಾಕ್ಸ್ ಲೈನ್ ===
“ಪಾಲಬಾವಿ ಗ್ರಾಮದಲ್ಲಿ 2.80ಕೋಟಿ ವೆಚ್ಚದಲ್ಲಿ ಜಲಜೀವನ್ ಮಷೀನ್ ಕಾಮಗಾರಿಗೆ ಶಾಸಕರು ಮಹೇಂದ್ರ ತಮ್ಮಣ್ಣರವರ ಚಾಲನೆ ನೀಡಿದ್ದು, ಗ್ರಾಮದ ಸುತ್ತಳತೆಯ 27 ಕಿಲೋಮೀಟರ್ ವ್ಯಾಪ್ತಿಯಲ್ಲಿ ಪೈಪ್ ಲೈನ್ ಮಾಡಲಾಗುವುದು, ಹೆಚ್ಚು ಜನಸಂಖ್ಯೆಯಲ್ಲಿ ವಾಸವಾಗಿರುವ ಪ್ರದೇಶದಲ್ಲಿ 3 ಟ್ಯಾಂಕ್ ಗಳನ್ನು ನಿರ್ಮಾಣ ಮಾಡುತ್ತೇವೆ, ಅಂದಾಜು 100ಕ್ಕೂ ಮನೆಗಳಿಗೆ ಶುದ್ಧ ಕುಡಿಯುವ ನೀರಿನ್ನು ಒದಗಿಸುವ ಮಹತ್ವಾಕಾಂಕ್ಷೆ ಯೋಜನೆ ಇದಾಗಿದ್ದು ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕು”
====} ಎಇಇ ಎಸ್.ಬಿ.ಮೈಶಾಳೆ
(ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ರಾಯಬಾಗ)
ಈ ಸಂದರ್ಭದಲ್ಲಿ ಗ್ರಾಮಪಂ ಅಧ್ಯಕ್ಷೆ ಶ್ರೀಮತಿ ಶೋಭಾ ಪುರಂದರ ಕುರಬೆಟ್ಟಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಎಸ್.ಬಿ.ಮೈಶಾಲೆ, ಕುಡಚಿ ಮತಕ್ಷೇತ್ರದ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಪ್ರದೀಪ ಹಾಲ್ಗುಣಿ, ನಿವೃತ್ತ ಪ್ರಧಾನಗುರು ಚಂದ್ರಯ್ಯ ಹಿರೇಮಠ, ಮಹಾದೇವ ಮರಡಿ, ಪಿಡಿಒ ಶ್ರೀಕಾಂತ ಪಾಟೀಲ, ಗ್ರಾಮಪಂ ಸದಸ್ಯರಾದ ಬಸಪ್ಪ ತೇಗೂರ, ಸಿರಿಯಾಳ ಮಾದರ, ಗುರುನಾಥ ಜುಂಜರವಾಡ, ಪರಪ್ಪ ಗೋಡಿ, ಪ್ರಭು ಕರೋಶಿ, ಗಿರಪ್ಪ ಬಳಗಾರ, ಇಲಾಹಿ ಕಾಗವಾಡ, ಗುತ್ತಿಗೆದಾರ ಶಿವಾನಂದ ಯರಡೆತ್ತಿ, ಮಹಾದೇವ ಪಟ್ಟಣಶೆಟ್ಟಿ, ಶ್ರೀಶೈಲ ಮರಡಿ, ಮಹಾಲಿಂಗ ಜನವಾಡ, ಹೈದರ್ ಮುಜಾವರ, ರಮೇಶ ಉಳ್ಳಾಗಡ್ಡಿ, ಭೀಮಶಿ ತೇಗೂರ, ಮುತ್ತಪ್ಪ ಶಿವಾಪುರ, ಡಾ.ಮಲ್ಲಿಕಾರ್ಜುನ ಖಾನಗೌಡ, ಭೀಮಪ್ಪ ಜಂಜರವಾಡ, ಹನುಮಂತ ಕಾಡಶೆಟ್ಟಿ, ಅರ್ಜುನ ತುಪ್ಪದ, ಹನುಮಂತ ತಳ್ಳಿ, ಮಾಯಪ್ಪ ಕರಜಗಿ ಇತರರು ಇದ್ದರು.