ವರದಿ :ಸಂಜೀವ್ ಬ್ಯಾಕುಡೆ
ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಜಮಖಂಡಿ ಮಿರಜ ರಸ್ತೆಗಿರುವ ಹಳೆ ಸೇತುವೆ ಧ್ವಂಸಗೊಳಿಸಿ ಹೊಸ ಸೇತುವೆ ನಿರ್ಮಾಣ ಕಾರ್ಯದಿಂದಾಗಿ ರಸ್ತೆ ಸಂಚಾರವನ್ನು ಪರ್ಯಾಯ ಮಾರ್ಗದಿಂದ ಚಾಲನೆ ಮಾಡಲಾಗಿತ್ತು ಇದರಿಂದ ಜಮಖಂಡಿಯಿಂದ ಬರುವ ಭಾರಿ ವಾಹನಗಳು ಸುಟ್ಟಟ್ಟಿ ಕ್ರಾಸದಿಂದ ಚಿಂಚಲಿ ರೇಲ್ವೆ ಸ್ಟೇಷನ್ ಚಿಂಚಲಿ ಪಟ್ಟಣ ಮಾರ್ಗವಾಗಿ ಕುಡಚಿಗೆ ಬಂದು ಮಿರಜ ಕಡೆಗೆ 8-10ಕೀಮೀ ಹೆಚ್ಚಿನ ಪ್ರಯಾಣ ಕೈಗೊಳ್ಳುವ ಅನಿವಾರ್ಯ ಬಂದಿತ್ತು ಅದೇ ರೀತಿ ಲಘು ವಾಹನಗಳು ಕುಡಚಿ ಪಟ್ಟಣದ ರೇಲ್ವೆ ಗೇಟ್ ಮುಖಾಂತರ ಪ್ರಯಾಣ ಕೈಗೊಳ್ಳಬೇಕಾಗಿತ್ತು ಇದರಿಂದ ಗೇಟ್ ಬಂದ್ ಆದ ಸಂದರ್ಭದಲ್ಲಿ ಪಟ್ಟಣದಲ್ಲಿ ಒಂದು ಗಂಟೆ ಟ್ರಾಫಿಕ್ ಆಗುತಿತ್ತು ಸದ್ಯ 80ಪ್ರತಿಶತ ಸೇತುವೆ ಕಾಮಗಾರಿ ಪೂರ್ಣವಾಗಿದ್ದರಿಂದ ಕಳೆದ ವಾರ ದ್ವಿಚಕ್ರ ವಾಹನಗಳು ಹಾಗೂ ಕಾಲ್ನಡಿಗೆ ಪ್ರಯಾಣಿಕರಿಗೆ ಸೇತುವೆ ಸಂಚಾರಕ್ಕೆ ಮುಕ್ತವಾಗಿದ್ದು ಶನಿವಾರದಿಂದ ನಾಲ್ಕು ಚಕ್ರ ಸೇರಿದಂತೆ ಭಾರಿ ವಾಹನಗಳ ಸಂಚಾರಕ್ಕೆ ಮುಕ್ತವಾಗಿದ್ದು ಪ್ರಯಾಣಿಕರು ಎಂದಿನಂತೆ ಯಾವುದೇ ತೊಂದರೆ ಇಲ್ಲದೆ ಮೊದಲಿದ್ದ ಮಾರ್ಗದಿಂದಲೆ ಪ್ರಯಾಣ ಕೈಗೊಳ್ಳಬಹುದೆಂದು ಅಧಿಕಾರಿಗಳು ಗುತ್ತಿಗೆದಾರರು ತಿಳಿಸಿದ್ದಾರೆ.





