ತುಂಗಳ :ಬರಗಾಲ, ಮೇವು ನೀರಿನ ಕೊರತೆ ಹಿನ್ನೆಲೆಯಲ್ಲಿ ಗೋವುಗಳು ಕಟುಕರ ಪಾಲಾಗುತ್ತಿವೆ ಇದನ್ನು ತಡೆಯಲು ಸಾರ್ವಜನಕಿರ ಸಹಕಾರದೊಂದಿಗೆ ಗೋಶಾಲೆ ಪ್ರಾರಂಭಿಸಿ ಮೇವಿನ ಕೊರತೆಯಿಂದ ತೊಂದರೆ ಅನುಬವಿಸುತ್ತಿರುವ
ರೈತರಿಗಾಗಿ ಅಳಿಲು ಸೇವೆ ನಮ್ಮದಾಗಿರಲಿ ಎಂದು
ಜಮಖಂಡಿ ತಾಲೂಕಿನ ತುಂಗಳ ಗ್ರಾಮದ ಭಾರತ ಪೆಟ್ರೋಲ್ ಬಂಕಿನ ಪಕ್ಕದಲ್ಲಿ ಗೋಶಾಲೆಯನ್ನು ಪ್ರಾರಂಭಿಸಲಾಗುತ್ತಿದೆ
ಮೇವಿನ ಕೊರತೆ ಇರುವ ರೈತರು ಇದರ ಸದುಪಯೋಗ ಪಡೆದುಕೊಳ್ಳಲು ವಿನಂತಿ, ಹಾಗೆಯೇ ಹೆಚ್ಚಿನ ಪ್ರಮಾಣದ ಹಸಿಮೇವು,ಮೆಕ್ಕೆಜೋಳ, ಜೋಳದ ಕಣಿಕೆ, ತೊಗರಿ, ಶೇಂಗಾ ಹೊಟ್ಟನ್ನು ಗೋಸೇವಾ ಕೇಂದ್ರಕ್ಕೆ ನೀಡುವಂತೆ ರೈತರಲ್ಲಿ ವಿನಂತಿಸಿದ್ದಾರೆ.
ವಿಶ್ವದಲ್ಲಿಎಲ್ಲೂ ಇಲ್ಲದಷ್ಟು ಗೋ ಸಂತತಿ ನಮ್ಮ ದೇಶದಲ್ಲಿದ್ದು, ಗೋವುಗಳಿಗೆ ಆಶ್ರಯ ನೀಡಿ ಅವುಗಳ ಸಂರಕ್ಷಣೆ ಮೊದಲ ಕರ್ತವ್ಯ ಆಗಬೇಕಾಗಿದೆ. ಗೋ ಸಂರಕ್ಷಣೆ ನಮ್ಮ ಸಂಸ್ಕೃತಿಯಾಗಿರುವುದರಿಂದಲೇ ಭಾರತದ ಸಂಸ್ಕೃತಿ ವಿಶ್ವ ಮಟ್ಟದಲ್ಲಿಗುರುತಿಸಿಕೊಂಡಿದೆ ಎಂದು ಸುರೇಶ್ ಹಂಚಿನಾಳ ತಿಳಿಸಿದರು
ಗೋವಿನ ಹಾಲು ಸೇರಿದಂತೆ ಗೋ ಉತ್ಪನ್ನಗಳು ನಮ್ಮ ಶರೀರಕ್ಕೆ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಆದ್ದರಿಂದ ಗೋವುಗಳಿಗೆ ನಾವು ವಿಶೇಷ ಆದ್ಯತೆ ನೀಡಬೇಕು. ಗೋ ರಕ್ಷಣೆ ನಿಟ್ಟಿನಲ್ಲಿ ಎಲ್ಲರೀತಿಯ ಸಹಕಾರ ನೀಡುವುದಾಗಿ ಅವರು ಹೇಳಿದರು.
ಭಾರತದ ಸನಾತನ ಮೌಲ್ಯಗಳಿಗೆ ಜಗತ್ತು ತೆರೆದುಕೊಂಡಿದೆ. ಹಿಂದೆ ರಾಸಾಯನಿಕ ಗೊಬ್ಬರಗಳ ಬಳಸಿ
ಎನ್ನುತ್ತಿದ್ದವರು. ಈಗ ಸಾವಯವ ಗೊಬ್ಬರವನ್ನು ಬಳಸಿ ಎಂದು ಹೇಳುತ್ತಿದ್ದಾರೆ. ಇದಕ್ಕೆ ಗೋ ಮಾತೆಯ ಮಹತ್ವವೇ ಕಾರಣ. ವಿಶ್ವಕ್ಕೆ ಭಾರತವು ಅತಿದೊಡ್ಡ ಆಧ್ಯಾತ್ಮಿಕ ಶಕ್ತಿಕೇಂದ್ರವಾಗಿದೆ. ದೇಶದ ಅಳಿವು ಉಳಿವು ಆಧ್ಯಾತ್ಮಿಕ ಶಕ್ತಿಯಲ್ಲಿಅಡಗಿದೆ. ದೇಶದ ಸನಾತನ ಮೌಲ್ಯಗಳಿಗೆ ಮತ್ತೆ ಜೀವ ಬಂದಿದೆ ಗೋವುಗಳನ್ನು ಸಾಕಲು ಶಕ್ತಿ ಇಲ್ಲದವರು ಕಟುಕರಿಗೆ ಮಾರುವ ಬದಲು ನಮ್ಮ ಗೋಶಾಲೆಗೆ ತಂದು ಬಿಡುವಂತೆ ಮನವಿ ಮಾಡಿದ್ದಾರೆ