ಬೆಳಗಾವಿ. ರಾಯಬಾಗ
ವರದಿ :ಸಂಗಮೇಶ ಹಿರೇಮಠ
ಮುಗಳಖೋಡ: ಪಟ್ಟಣದ ಶ್ರೀ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ಪವಾಡ ಪುರುಷ ಶ್ರೀ ಯಲ್ಲಾಲಿಂಗ ಮಹಾ ಪ್ರಭುಗಳ ಸಂಕಲ್ಪದಂತೆ ಪ್ರತಿ ವರ್ಷ ಕುಸ್ತಿ ನಡೆಯುವ ವಾಡಿಕೆ ಇದೆ. ಅದರಂತೆ ಈ ವರ್ಷವೂ ಕೂಡಾ ಶುಕ್ರವಾರ ಸಾಯಂಕಾಲ ೬ ಗಂಟೆಗೆ ಜಂಗಿ ನಿಕಾಲಿ ಕುಸ್ತಿಗಳು ನಡೆದವು.
ಶ್ರೀಮಠದ ಶ್ರೀ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಕುಸ್ತಿಗೆ ಚಾಲನೆ ನೀಡಿದರು.
ಕುಸ್ತಿಯಲ್ಲಿ ಮಹಾರಾಷ್ಟ್ರ, ಪಂಜಾಬ್, ಹಾಗೂ ಬೇರೆ ಬೇರೆ ರಾಜ್ಯಗಳಿಂದ, ಜಿಲ್ಲೆಗಳಿಂದ ಆಗಮಿಸಿದ ಪೈಲ್ವಾನ್ ರು ಹಾಗೂ ಕುಡಚಿ ಮತಕ್ಷೇತ್ರದ ಅಭ್ಯರ್ಥಿಗಳಾದ ಪಿ.ರಾಜೀವ್, ಮಹೇಂದ್ರ ತಮ್ಮಣ್ಣವರ, ಶ್ರೀಶೈಲ ಭಜೇಂತ್ರಿ ಸೇರಿದಂತೆ ಶ್ರೀಮಠದ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.