ಸಂಕೇಶ್ವರ; ವಿಶ್ವಕನ್ನಡ ರಕ್ಷಕ ದಳದ ರಾಜ್ಯಕೇಂದ್ರ ಕಛೇರಿಯಾದ ಸೋಲಾಪುರ ಗ್ರಾಮದ ಕರ್ನಾಟಕ ರತ್ನ ಡಾ. ರಾಜಕುಮಾರ ವೃತ್ತದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿವರಾಜ್ ಕುಡಬಾಳೆ, ಅಜೀತ್ ಧನಗರ, ಆಸೀಫ್ ಸುತಾರ, ಸಂಜು ಮಾಳಿ, ಸಚಿನ್ ಜಿನಗಿ ಸೇರಿದಂತೆ ಹಾಲುಮತ ಸಮಾಜ ಬಾಂಧವರು, ವಿಕರದ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.