ಹಳ್ಳೂರ :ಸಮಾಜದಲ್ಲಿ ತನ್ನನ್ನೇ ತಾನು ಗುರುತಿಸಿಕೊಂಡು ಬಡವ ದಿನ ದಲಿತರ ನೊಂದ ಬೆಂದವರ ಬಾಳಿಗೆ ಬೆಳಕಾಗಿ ನಿರಂತರ ಸಮಾಜ ಸೇವೆಯಲ್ಲಿ ತೊಡಗಿ ಮೇಲು ಕೀಳು,ಜಾತಿ ಭೇದ ಬಾವವಿಲ್ಲದೆ ನೇರ ನುಡಿಯುಳ್ಳ,ಚಿಕ್ಕ ವಯಸ್ಸಿನಲ್ಲಿಯೇ ಸಮಾಜ ಸೇವೆ ಮಾಡಿ ಸಮಾಜದಲ್ಲಿ ಗುರುತಿಸಿಕೊಂಡ ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಅವರ ಕಾರ್ಯ ನಿಜಕ್ಕೂ ಮೆಚ್ಚುವಂತಹದ್ದು ಎಂದು ಮುಖಂಡ ಅಶೋಕ ತೇರದಾಳ ಹೇಳಿದರು.
ಗ್ರಾಮದ ಶ್ರೀ ಬಸವೇಶ್ವರ ಸರ್ಕಲ್ ದಲ್ಲಿ ಸಮಾಜ ಸೇವಕ ಹಾಗೂ ಪತ್ರಕರ್ತ ಮುರಿಗೆಪ್ಪ ಮಾಲಗಾರ ಅವರ ಹುಟ್ಟುಹಬ್ಬದ ನಿಮಿತ್ಯ ಕೇಕ್ ಕಟ್ ಮಾಡಿ ಸಿಹಿ ತಿನಿಸಿ ಮಾತನಾಡಿ ಈಗಿನ ಯುವಕರು ಕೆಟ್ಟ ಚಟಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ.
ಮುರಿಗೆಪ್ಪ ಮಾಲಗಾರ ಅವರು ಯಾವುದೇ ವ್ಯಸನಕ್ಕೆ ಅಂಟಿಕೊಂಡಿಲ್ಲ ಇದ್ದದ್ದು ಇದ್ದ ಹಾಗೆ ಹೇಳಿ ಸಾಕಷ್ಟ ಜನರ ಮನಸ್ಸಿನಲ್ಲಿದ್ದಾರೆ ಎಂದು ಹೇಳಿದರು.
ಯುವ ನಾಯಕರಾದ ಅಪ್ಪು ಸಿದ್ದಾಪುರ ಹಾಗೂ ಬಸು ನಿಡೋಣಿ ಮಾತನಾಡಿ ಅನೇಕ ವರ್ಷಗಳಿಂದ ಸಮಾಜ ಸೇವೆ ಹಾಗೂ ಪ್ರಾಮಾಣಿಕ ಪತ್ರಕರ್ತ ನಾಗಿ ಸೇವೆ ಸಲ್ಲಿಸಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡು ಒಳ್ಳೆ ಕೆಲಸ ಕಾರ್ಯ ಮಾಡುತ್ತಾ ಸಭೆ ಸಮಾರಂಭಗಳಲ್ಲಿ ಬಾಗವಹಿಸಿ ಎಲ್ಲರ ಜೊತೆ ಬೆರೆತುಕೊಂಡು ದುಷ್ಟರಿಗೆ ಸಿಂಹ ಸ್ವಪ್ನವಾಗಿಯಿದ್ದುಕೊಂಡು ಅತೀ ಚಿಕ್ಕ ವಯಸ್ಸಿನಲ್ಲೇಯೇ ಹೆಮ್ಮರವಾಗಿ ಬೆಳೆದಿದ್ದು ಸಂತೋಷದಾಯಕವಾಗಿದೆ.
ಮುಂದಿನ ದಿನಮಾನಗಳಲ್ಲಿ ರಾಜಕೀಯದಲ್ಲಿ ಉನ್ನತ ಸ್ಥಾನ ಮಾನ ದೊರೆಯಲು ನಾವು ಕೂಡಾ ಸಹಾಯ ಸಹಕಾರ ನೀಡಲು ಸಿದ್ದರಿದ್ದೇವೆ. ಅಧಿಕಾರ ದೊರೆತರೆ ಹೆಚ್ಚು ಸಮಾಜ ಸೇವೆ ಮಾಡಲು ಮುರಿಗೆಪ್ಪ ಮಾಲಗಾರ ಅವರಿಗೆ ಅನುಕೂಲವಾಗುವುದೆಂದು ಹೇಳಿದರು.
ಈ ಸಮಯದಲ್ಲಿ ಗಜಾನನ ಡಬ್ಬನ್ನವರ. ಮಾಂತೇಶ ಬಾಗೋಡಿ.ಬಸವರಾಜ ಚನ್ನಾಳ. ಬಸವರಾಜ ನೇಸುರ. ಶಿವು ಹುಬ್ಬಳ್ಳಿ. ಬಾಳಪ್ಪ ಬಾಗೋಡಿ. ರಮೇಶ ಕತ್ತಿ. ಶಿವಪ್ಪ ಲೋಕಣ್ಣವರ. ಮೌನೇಶ ಪತ್ತಾರ. ಲಕ್ಷಣ ಲೋಕಣ್ಣವರ. ಶಿವು ಕಮಲದಿನ್ನಿ. ಸಿದ್ದು ತೇರದಾಳ. ಸಚಿನ ಕೋಹಳ್ಳಿ. ಶಶಾಂಕ ಗೌರವಗೋಳ.ಮಲ್ಲಪ್ಪ ಗೊಸಬಾಳ. ಶಾನೂರ ಬಾಗೋಡಿ. ಶ್ರೀಶೈಲ ಕೂಲಿಗೋಡ.ಸಂತೋಷ ಡಬ್ಬಣ್ಣವರ.ಶ್ರೀಶೈಲ ತವಗ. ಸಿದ್ದು ಬಡಿಗೇರ.ಸೇರಿದಂತೆ ಅನೇಕರಿದ್ದರು. ಪ್ರಾರಂಭದಲ್ಲಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬವನ್ನು ಸಂಭ್ರಮಿಸಿದರು.