ಶ್ರೀ ಜೆ.ಪಿ.ಶಿರಗೂರಕರ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ “ಜೆಪಿಎಸ್ ಜನಪದ ಉತ್ಸವ 2023” ಕಾರ್ಯಕ್ರಮ

Share the Post Now

ಬೆಳಗಾವಿ

ವರದಿ :ಸಚಿನ್ ಕಾಂಬ್ಳೆ



ರಾಯಭಾಗ :ಪರಮಾನಂದವಾಡಿಯ ಶ್ರೀ ಜೆ.ಪಿ.ಶಿರಗೂರಕರ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಜೆಪಿಎಸ್ ಜಾನಪದ ಸಿರಿ ಉತ್ಸವ ೨೦೨೩ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ನೃತ್ಯಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ಅಭೂತವಾಗಿ ಮೂಡಿಬಂದವು.

ಈ ಕಾರ್ಯಕ್ರಮದಲ್ಲಿ ಅತಿಥಿ ಸ್ಥಾನವಹಿಸಿ ಮಾತನಾಡಿದ ಪ್ರೊ.ಅಶೋಕ ಕಾಂಬ್ಳೆ,ಆಧುನಿಕತೆ ಪ್ರಭಾವದಿಂದಾಗಿ ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ಕಲೆ ಕಣ್ಮರೆಯಾಗುತ್ತಿವೆ. ಅವುಗಳನ್ನು ಉಳಿಸಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿಯಾಗಿದೆ ಹೇಳಿದರು.ಅವರು ಆಯೋಜಿಸಿದ್ದ ‘ಜನಪದ ಸಿರಿ ಉತ್ಸವ’ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನಪದ ಕಲೆಗಳಲ್ಲಿ ದೇಸಿಯ ಸೊಗಡು ಕಾಣಬಹುದು. ಈ ನೆಲದ ಸಂಸ್ಕೃತಿ ಹಾಗೂ ಸಂಸ್ಕಾರ ಅದರಲ್ಲಿ ಅಡಕವಾಗಿದೆ. ಮುಂದಿನ ಪೀಳಿಗೆಗೆ ಅದನ್ನು ಉಳಿಸಿಕೊಂಡು ಹೋಗಬೇಕು ಎಂದು ಹೇಳಿದರು.

ಇದೆ ಸಮಯದಲ್ಲಿ ಆಯ್ ಕ್ಯೂ ಎ ಸಿ ಸಂಯೋಜಕರಾದ ಡಿ.ಎಮ್ ದುರದುಂಡಿ ಸ್ವಾಗತಿಸಿ,ನಿರೂಪಿಸಿದರು.

ಈ ವೇಳೆ ಪ್ರಾಚಾರ್ಯರಾದ ಡಾ‌.ರಾಜು ಕಾಂಬ್ಳೆ,ವಿಜಯ ದಳವಾಯಿ,ಡಿ.ಎಲ್ ಶಿರಹಟ್ಟಿ,ಡಿ.ಕೆ.ಕಾಂಬ್ಳೆ,ಎಮ್ ಎಸ್ ಹಂಜೆ,ಡಾ.ಕವಿತಾ ಘಟಕಾಂಬಳೆ,ಎಸ್ ಎಸ್ ಚೌಗಲಾ ಸೇರಿದಂತೆ ಶಾಲಾ ಸಿಬ್ಬಂದಿ ವರ್ಗ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!