ಬೆಳಗಾವಿ.
ಕಾಗವಾಡ ತಾಲ್ಲೂಕಿನ ಜನರು ಇದರ ಸದುಪಯೋಗಪಡೆದುಕೊಳ್ಳಬೇಕೆಂದು ಜಿಲ್ಲಾ ನೊಂದಣಾಧಿಕಾರಿಯಾದ ಮಹಾಂತೇಶ ಪಟಾತರ ಹೇಳಿದರು.
ಅವರು ಗುರುವಾರ ದು ಕಾಗವಾಡ ಪಟ್ಟಣದಲ್ಲಿ ಉಪನೊಂದಣಿ ಕಾರ್ಯಾಲಯದ ಕಾರ್ಯಾರಂಭ ಮಾಡಿ ಮಾತನಾಡುತ್ತಾ,ತಾಲ್ಲೂಕಿನ ಜನರ ಬಹುದಿನಗಳ ಬೇಡಿಕೆಯಾಗಿದ್ದ ಉಪನೊಂದಣಿ ಕಛೇರಿ ಕಾರ್ಯಾರಂಭಗೊಂಡಿದ್ದು ತಾಲ್ಲೂಕಿನ ಜನತೆಗೆ ದೂರದ ಅಥಣಿಗೆ ಅಲೆದಾಡುವದನ್ನ ತಪ್ಪಿಸಿದಂತಾಗಿದೆ.
ಈ ಕಛೇರಿಯಲ್ಲಿ ಆಸ್ತಿ ನೊಂದಣಿ,ವಿವಾಹ ನೊಂದಣಿ,ಹಕ್ಕುಗಳ ವರ್ಗಾವಣೆ, ಕಾವೇರಿ ೨ ತಂತ್ರಾಂಶದಲ್ಲಿ ಇರುವ ಎಲ್ಲ ಸೌಲಭ್ಯಗಳು ಈ ಕಛೇರಿಯಲ್ಲಿ ಲಭ್ಯವಿರುತ್ತವೆ ಈ ಭಾಗದ ಸಾರ್ವಜನಿಕರರು ಇದರ ಸದುಪಯೋಗ ಪಡೆದುಕೊಳ್ಳಬೆಕೆಂದು ಕರೆ ನೀಡಿದರು.
ಈ ವೇಳೆ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಿವಗೌಡ ಕಾಗೆ ಮಾತನಾಡಿ,ತಾಲ್ಲೂಕಿನ ಬಹುದಿನಗಳ ಬೇಡಿಕೆ ಇವತ್ತು ಈಡೇರಿದೆ.ಇನ್ನು ಅನೇಕ ಕಛೇರಿಗಳು ಶೀಘ್ರವಾಗಿ ಕಾರ್ಯಾರಂಭವಾಗಲಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಸಂಜಯ ಇಂಗಳೆ,ಸಿಡಿಪಿಒ ಸಂಜಯಕುಮಾರ ಸದಲಗೆ,ಬಿಇಒ ಎಂ.ಆರ್.ಮುಂಜೆ, ಕಾಗವಾಡ ಉಪ ನೊಂದಣಾಧಿಕಾರಿ ರಾಜಶೇಖರ ಮುಗ್ಗನ್ನವರ,ರಾಜು ಮದನೆ,ಶಂಕರ ವಾಘಮೋಡೆ,ಶಂಕರ ಮಗದುಮ್,ಜ್ಯೋತಿಕುಮಾರ ಪಾಟೀಲ್, ಕಾಕಾ ಪಾಟೀಲ್,ಚಿದಾನಂದ ಅವಟಿ,ನಾಥಗೌಡಾ ಪಾಟೀಲ್, ವಿಜಯ ಅಕಿವಾಟೆ,ರೇಖಾ ಪುಂಜಪ್ಪಗೊಳ,ಉಮೇಶ ಪಾಟೀಲ್,ಸುನೀಲ ಕಾಂಬಳೆ,ಸೇರಿದಂತೆ ಅನೇಕರು ಉಪಸ್ಥಿತರಿದ್ದರು.