ಹಳ್ಳೂರ .
ಸ್ಥಳೀಯ ಬ. ಕು.ಮ. ಪ್ರೌಡ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಯಾದ ನಾಗರಾಜ ಬಸಪ್ಪ ಕೂಲಿಗೋಡ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 95.04% , 594 ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತಿರ್ಣನಾಗಿದ್ದಾನೆ. ಆಂಗ್ಲ ಭಾಷೆಯಲ್ಲಿ 100 ಕ್ಕ 100 ಅಂಕ ಪಡೆದು ದಾಖಲೆ ಮಾಡಿದ್ದಾನೆ.
ತಾಲ್ಲೂಕಿಗೆ,ಗ್ರಾಮಕ್ಕೆ ಶಾಲೆಗೆ ಕೀರ್ತಿಯನ್ನು ಹೆಚ್ಚಿಸಿದ್ದಾನೆ.ಗ್ರಾಮದ 1 ನೇ ತರಗತಿಯಿಂದ 10ನೇ ತರಗತಿಯವರೆಗೆ ಕನ್ನಡ ಶಾಲೆಯಲ್ಲಿ ಕಲಿತು ಬಡ ಕುಟುಂಬದಲ್ಲಿ ಜನಿಸಿ ಕಾಯಿಪಲ್ಲೆ ಮಾಡುತ್ತಿರುವ ತಾಯಿ ಯಮನವ್ವ ಕೂಲಿ ಮಾಡುತ್ತಿರುವ ತಂದೆ ಬಸಪ್ಪ ಅವರ ಬಡತನ ಕುಟುಂಬದಲ್ಲಿ ಸಾಧನೆ ಮಾಡಿದ್ದೂ ಸಾಧನೆಗೆ ಬಡತನ ಅಡ್ಡಿಯಲ್ಲ ಅನ್ನುವುದಕ್ಕೆ ಸಾಕ್ಷಿಯಾಗಿದೆ.ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ್ದಕ್ಕೆ ಶಾಲೆಯ ಶಿಕ್ಷಕರು ತಂದೆ ತಾಯಿ, ಶಿಕ್ಷಣ ಪ್ರೇಮಿಗಳು ಅಭಿನಂದನೆಗಳನ್ನು ಸಲ್ಲಿಸಿದರು.