ಹಳ್ಳೂರ . ಕಂಬಿ ಮಲ್ಲಯ್ಯ ಐದೇಶಿ ಕಾರ್ಯಕ್ರಮವು ಗ್ರಾಮದಲ್ಲಿ ಎರಡು ದಿನ ಹಬ್ಬದ ವಾತಾವರಣದಂತೆ ಕಂಡು ಬಂದಿತ್ತು ಸೋಮವಾರದಂದು ಗ್ರಾಮದ ಎಲ್ಲ ದೇವರಿಗೆ ನೈವೇದ್ಯ ಅರ್ಪಿಸಿದರು. ಮಂಗಳವಾರ ನಸುಕಿನ ಜಾವದಲ್ಲಿ. ನೂರಾರು ಜನ ಮಹಿಳೆಯರು ಆರತಿ, ನೂರಾರು ಜನ ಪುರುಷರು ದಿವಟಗಿ ತಂದು ಕಂಬಿ ಮಲ್ಲಯ್ಯ ದೇವರ ಮುಂದೆ ದೀಪ ಹಚ್ಚಿದರು. ನಂತರ ಶ್ರೀಶೈಲಕ್ಕೆ ಹೋಗಿ ಬಂದ ಕುಟುಂಬದ ಹೆಸರಿನಲ್ಲಿ ಜಂಗಮರು ಕಂಬಿ ಮಲ್ಲಯ್ಯ ದೇವರನ್ನು ಹೆಗಲ ಮೇಲೆ ಹೊತ್ತುಕೊಂಡು ಕುಟುಂಬ ಹೆಸರು ಕೂಗುತ್ತಾ ಬಿರದಾವಳಿ ಹಾಕಿದರು.
ಜೋಡು ಕಂಬಿ ಮಲ್ಲಯ್ಯ ದೇವರನ್ನು ಆರತಿ, ದಿವಟಗಿ ವಿವಿಧ ವಾದ್ಯ ಮೇಳದೊಂದಿಗೆ ಪ್ರತೀ ವರ್ಷ ಪದ್ಧತಿಯಂತೆ ಕಂಬಿ ಮಲ್ಲಯ್ಯ ಕೂಡುವ ಸ್ಥಳಕ್ಕೆ ಕೂಡಿಸಿ ಮಂಗಳಾರತಿ ಮಾಡಿ ಕಂಬಿ ಐದೇಶಿ ಕಾರ್ಯಕ್ರಮವು ಮಂಗಳಗೊಂಡಿತು.ಕಾರ್ಯಕ್ರಮದಲ್ಲಿ ಗ್ರಾಮದ ಜಂಗಮರು ಗುರು ಹಿರಿಯರು ಭಾಗವಹಿಸಿದ್ದು ಸರ್ವರಿಗೂ ಮಸರಾವಲಕ್ಕಿ ವ್ಯವಸ್ಥೆ ನಡೆಯಿತು.