ಬೆಂಗಳೂರು :ಖಾಸಗಿ ವಲಯದ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಕನ್ನಡ ಜಾಗೃತಿ ವೇದಿಕೆ ವತಿಯಿಂದ ಬೆಂಗಳೂರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯ ನಂತರ ರಾಜ್ಯಾಧ್ಯಕ್ಷರಾದ ಕೆ.ಮಂಜುನಾಥ ದೇವ ನೇತೃತ್ವದಲ್ಲಿ ಮನವಿ ಪತ್ರವನ್ನು ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯನವರಿಗೆ ನೀಡಲಾಯಿತು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿಗಳು ಕನ್ನಡಿಗರಿಗೆ ಖಾಸಗಿ ವಲಯದ ಉದ್ಯೋಗಗಳಲ್ಲಿ ಮೀಸಲಾತಿ ಜಾರಿ ಮಾಡಲು ಹಲವು ಸಾಂವಿಧಾನಿಕ ತೋಡಕುಗಳು ಇರುವುದರಿಂದ, ಸರ್ಕಾರದ ಅಡ್ವಿಕೇಟ್ ಜನರಲ್ ರವರ ಬಳಿ ಚರ್ಚಿಸಿ ಉದ್ಯೋಗ ಮೀಸಲಾತಿ ನೀಡಲು ಕ್ರಮಜರುಗಿಸುತ್ತೇವೆ ಎಂಬ ಭರವಸೆ ನೀಡಿದರು.
ನಿಯೋಗದಲ್ಲಿ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷರಾದ ಸಾ.ರಾ.ಗೋವಿಂದನವರು,ಕನ್ನಡ ಜಾಗೃತಿ ವೇದಿಕೆಯ ರಾಜ್ಯ ಕಾನೂನು ಸಲಹೆಗಾರರಾದ ಡಾ.ಕೆ.ಪಿ.ವೆಂಕಟೇಶ್ ರವರು, ಯುವಘಟಕದ ರಾಜ್ಯಾಧ್ಯಕ್ಷರಾದ ಎಸ್.ಕೆ.ಗೌರೀಶ್,ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕವಿತಾ ಪೇಟೆಮಠ ಇದ್ದರು.
ಹೋರಾಟಕ್ಕೆ,ಬೆಳಗಾವಿ,ಧಾರವಾಡ,ಹಾವೇರಿ,ದಾವಣಗೆರೆ,ತುಮಕೂರು,ಬೆಂಗಳೂರು ಗ್ರಾಮಾಂತರ,ಬೆಂಗಳೂರು ನಗರಜಿಲ್ಲೆ,ಚಿಕ್ಕಬಳ್ಳಾಪುರ,ಕೊಪ್ಪಳ,ರಾಯಚೂರು ಜಿಲ್ಲೆಗಳಿಂದ ಆಗಮಿಸಿ ಯಶಸ್ವಿಗೊಳಿಸಿದ ಎಲ್ಲಾ ಪ್ರೀತಿಯ ಹೋರಾಟದ ಸೇನಾನಿಗಳಿಗೆ ರಾಜ್ಯಾಧ್ಯಕ್ಷರಾದ ಕೆ. ಮಂಜುನಾಥ ದೇವ ಕ್ರಾಂತಿಕಾರಕ ವಂದನೆಗಳನ್ನು ತಿಳಿಸಿದರು.